ಗಣೇಶ ಚತುರ್ಥಿ: ಕೆರೆ, ಬಾವಿ ಸ್ವಚ್ಛಗೊಳಿಸಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 30
ಗಣೇಶ ಚತುರ್ಥಿ ಅಂಗವಾಗಿ ಅವಳಿ ನಗರದ ಬಾವಿ, ಕೆರೆ, ಹೊಂಡ ಹಾಗೂ ಪ್ರಮುಖ ರಸ್ತೆಗಳನ್ನು ಸ್ವಚ್ಛಗೊಳಿಸುವಂತೆ ಮಹಾನಗರ ಪಾಲಿಕೆ ಆಯುಕ್ತ ರಮಣದೀಪ ಚೌಧರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಗಣೇಶ ಚತುರ್ಥಿ ಅಂಗವಾಗಿ ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಪೂರ್ವ ಸಿದ್ಧತಾ ಸಭೆಯಲ್ಲಿ ಈ ಕುರಿತು ರಮಣದೀಪ ಚೌಧರಿ ಹಲವು ಸೂಚನೆ ನೀಡಿದರು.
ವಲಯ ಕಚೇರಿ ವ್ಯಾಪ್ತಿಯಲ್ಲಿ ಪ್ರತಿ ವರ್ಷ ಗಣೇಶ ಮೂರ್ತಿ ವಿಸರ್ಜನೆಗೊಳ್ಳುವ ಬಾವಿ, ಕೆರೆ ಹಾಗೂ ಹೊಂಡಗಳ ಮಾಹಿತ್ನಿ ತಯಾರಿಸಲು ವಲಯ ಕಚೇರಿ ಸಹಾಯಕ ಆಯುಕ್ತರಿಗೆ, ಕಾರ್ಯನಿರ್ವಾಹಕ ಅಭಿಯಂತರಿಗೆ ಮತ್ತು ಪರಿಸರ ಅಭಿಯಂತರಿಗೆ ಸೂಚನೆ ನೀಡಿದ್ದಾರೆ.
ಸೆ. 9ರಿಂದ ಅವಳಿನಗರದಲ್ಲಿ ಗಜಾನನ ಉತ್ಸವದ ಅಂಗವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ನಾಗರಿಕರ ಮನೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ನಿಗದಿಪಡಿಸಿದ ಅವಧಿಯಲ್ಲಿ ಮೂರ್ತಿ ವಿಸರ್ಜನೆ ಮಾಡುವರು. ಈ ಹಿನ್ನೆಲೆಯಲ್ಲಿ ಪಾಲಿಕೆಗೆ ಅನೇಕ ಸಂಘಟನೆಗಳು ಮನವಿ ಮಾಡಿ, ಗಣೇಶ ಮೂರ್ತಿ ವಿಸರ್ಜನೆಯ ಮಾರ್ಗವನ್ನ್ನು ದುರಸ್ತಿ ಮಾಡಲು ಮತ್ತು ಬಾವಿ, ಹೊಂಡ ಹಾಗೂ ಕೆರೆಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲು ಕೋರಿರುವರು.
ಕಾರ್ಯನಿರ್ವಾಹಕ ಅಭಿಯಂತರು ವಲಯ ಕಚೇರಿಯಿಂದ ಸ್ವೀಕರಿಸಿದ ಪ್ರಸ್ತಾವನೆಗಳನ್ನು ಪರಿಶೀಲಿಸಿ ಅಗತ್ಯವಿದ್ದಲ್ಲಿ ತಾಂತ್ರಿಕ ಮತ್ತು ಆರ್ಥಿಕ ಮಂಜೂರಾತಿಯನ್ನು ಆ. 31ರೊಳಗೆ ವಿಲೇವಾರಿ ಮಾಡಲು ಹಾಗೂ ಸಂಬಂಧಿತ ಕೆಲಸವನ್ನು ಸೆ. 3ರೊಳಗೆ ಮುಗಿಸಲು ಸೂಚಿಸಿದ್ದಾರೆ.
ಗಣೇಶ ಮೂರ್ತಿ ವಿಸರ್ಜನೆಗೊಳ್ಳುವ ಅಧಿಕೃತ ಬಾವಿಗಳಿಗೆ ನೀರಿನ ಅವಶ್ಯಕತೆ ಇದ್ದಲ್ಲಿ ಕಾರ್ಯನಿರ್ವಾಹಕ ಅಭಿಯಂತರು ಜಲ ಮಂಡಳಿಗೆ ಸೆ. 4ರೊಳಗೆ ವಲಯ ಕಚೇರಿಯಿಂದ ನೀರು ಪೂರೈಕೆಯ ಕೋರಿಕೆ ಸಲ್ಲಿಸಲು ಸೂಚಿಸಲಾಗಿದೆ. ಕಾರ್ಯನಿರ್ವಾಹಕ ಅಭಿಯಂತರು ಜಲ ಮಂಡಳಿ ಹುಬ್ಬಳ್ಳಿ ಹಾಗೂ ಧಾರವಾಡ ಇವರು ವಲಯ ಕಚೇರಿಯಿಂದ ಸ್ವೀಕರಿಸಿದ ಪ್ರಸ್ತಾವನ್ನೆ ಪರಿಶೀಲಿಸಿ ಸೆ. 9ರೊಳಗೆ ಸಂಬಂಧಪಟ್ಟ ಬಾವಿ ಅಥವಾ ಹೊಂಡಕ್ಕೆ ನೀರು ಪೂರೈಸಲು ಸೂಚಿಸಿದೆ.
ಮಾರ್ಗ ಸ್ವಚ್ಛತೆ: ಗಣೇಶ ಮೂರ್ತಿ ವಿಸರ್ಜನೆಗೊಳ್ಳುವ ಮಾರ್ಗವನ್ನು ಸೆ. 8ರೊಳಗೆ ಗುರುತಿಸಿ ಈ ಮಾರ್ಗವನ್ನು ದುರಸ್ತಿ ಮಾಡಿ ಸ್ವಚ್ಛತೆಯಿಂದ ಇರಲು ಕ್ರಮ ತೆಗೆದುಕೊಳ್ಳಲು ಸಂಬಂಧಪಟ್ಟ ವಲಯ ಕಚೇರಿ ಸಹಾಯಕ ಆಯುಕ್ತರು ಹಾಗೂ ಕಾರ್ಯನಿರ್ವಾಹಕ ಅಭಿಯಂತರಿಗೆ ಸೂಚಿಸಲಾಗಿದೆ.
ವಲಯ ಕಚೇರಿ ವ್ಯಾಪ್ತಿಯಲ್ಲಿ ಗುರುತಿಸಿದ ಬಾವಿಗಳ ಹಾಗೂ ಹೊಂಡಗಳ ಮತ್ತು ಕೆರೆಗಳ ಮಾಹಿತಿಯನ್ನು ಕಚೇರಿಯ ಮುಂಭಾಗದಲ್ಲಿ ಮತ್ತು ವಲಯ ಕಚೇರಿ ವ್ಯಾಪ್ತಿಯ ಪ್ರಮುಖ ವೃತ್ತಗಳಲ್ಲಿ ಬ್ಯಾನರ್ನಲ್ಲಿ ಸಂಘಟನೆಗಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ವ್ಯಾಪಕ ಮಾಹಿತ್ನಿ ನೀಡಲು ಸೂಚಿಸಿದೆ.
ಕುಡಿಯುವ ನೀರಿನ ಬಾವಿಗೆ ಗಣೇಶ ಮೂರ್ತಿ ವಿಸರ್ಜನೆ ಮಾಡದಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ. ವಲಯ ಕಚೇರಿ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಠಾಣೆಗೆ ಮಾಹಿತ್ನಿ ಪೂರೈಸಲು ಸೂಚಿಸಿದೆ.
ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಪಾಲಿಕೆಯ ರಸ್ತೆಗಳನ್ನು ಅಗೆಯದಂತೆ ಸಂಬಂಧಪಟ್ಟ ಸಂಘಟನೆಗಳಿಗೆ ಮತ್ತು ಸಾರ್ವಜನಿಕರಿಗೆ ಪಾಲಿಕೆಯಿಂದ ಮನವಿ ಮಾಡಿಕೊಳ್ಳಲಾಗಿದೆ.
ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬಹುದಾದ ಸ್ಥಳಗಳನ್ನು ಗುರುತಿಸಿ ಈ ಸ್ಥಳಗಳಲ್ಲಿ ಗುಂಪು ಚಟವಟಿಕೆ ಯೋಜನೆಯಲ್ಲಿ ಅಳವಡಿಸಿ ಸ್ವಚ್ಛತ್ನೆ ಮಾಡಿಸುವುದು ಹಾಗೂ ಕಸವನ್ನು ಕೂಡಲೇ ವಿಲೇವಾರಿ ಆಗುವಂತೆ ಕ್ರಮ ತೆಗೆದುಕೊಳ್ಳಲು ವಲಯ ಕಚೇರಿಗೆ ಸೂಚಿಸಿ, ಸಾರ್ವಜನಿಕರು ಕಸವನ್ನು ತೆರೆದ ಚರಂಡಿಯಲ್ಲಿ ಹಾಕದಂತೆ ಪಾಲಿಕೆಯಿಂದ ಕೋರಲಾಗಿದೆ.
ಕಾರ್ಯನಿರ್ವಾಹಕ ಅಭಿಯಂತರಿಗೆ ಮತ್ತು ಸಹಾಯಕ ಆಯುಕ್ತರು ವಲಯ ಕಚೇರಿ ಇವರಿಗೆ ಈ ಎಲ್ಲ ಕೆಲಸಗಳನ್ನು ನಿರ್ವಹಿಸಲು ಮತ್ತು ತಾಂತ್ರಿಕ ಸಲಹೆ ಹಾಗೂ ನಿರ್ದೇಶನಗಳನ್ನು ನೀಡಲು ಅಧೀಕ್ಷಕ ಅಭಿಯಂತರಿಗೆ ಆಯುಕ್ತರು ಸೂಚಿಸಿದರು.
ಗಣೇಶ ಮೂರ್ತಿಗಳನ್ನು ಕೆರೆ, ಬಾವಿಗಳಲ್ಲಿ ಹಾಗೂ ಹೊಂಡಗಳಲ್ಲಿ ವಿಸರ್ಜಿಸುವ ಕುರಿತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹೊರಡಿಸಿರುವ ಮಾರ್ಗದರ್ಶಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಹಾಗೂ ಸ್ವಚ್ಛತೆ ಕಾಪಾಡುವಲ್ಲಿ ಮತ್ತು ಯಶಸ್ವಿ ಗಣೇಶ ಉತ್ಸವ ಆಚರಿಸಲು ಪಾಲಿಕೆಯೊಂದಿಗೆ ಸಾರ್ವಜನಿಕರ ಸಹಕಾರ ಕೋರಲು ಸಭೆಯಲ್ಲಿ ನಿರ್ಧರಿಸಲಾಯಿತು.