ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅಭಿವ್ಯಕ್ತಿ ಕೌಶಲ್ಯಕ್ಕೆ ಸ್ಪರ್ಧಾತ್ಮಕ ಚಟುವಟಿಕೆ

Mainashree
Updated On : 1 Sept 2013, 11:29 am

ಧಾರವಾಡ: ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಚಟುವಟಿಕೆಯಿಂದ ಅಭಿವ್ಯಕ್ತಿ ಕೌಶಲ್ಯ ಹೆಚ್ಚುತ್ತದೆ ಎಂದು ಚಿತ್ರದುರ್ಗದ ಎಸ್‌ಜೆಎಂ ವಿದ್ಯಾಪೀಠದ ಆಡಳಿತಾಧಿಕಾರಿ ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ ಹೇಳಿದರು.
ಸಮೀಪದ ರಾಯಾಪುರದ ಮಹಾಂತ ಕಾಲೇಜನ ಅರ್ಥಶಾಸ್ತ್ರ ವಿಭಾಗ, ವಾಣಿಜ್ಯ ಶಾಸ್ತ್ರ ವಿಭಾಗ ಹಮ್ಮಿಕೊಂಡಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ವಲಯದ ಅಂತರ್ ಕಾಲೇಜು ಮಟ್ಟದ 'ಅರ್ಥಮಂಥನ-2013 - ಅರ್ಥಶಾಸ್ತ್ರ ಯುವ ಪ್ರತಿಭಾ ಪೋಷಣೆ' ಉದ್ಘಾಟಿಸಿ ಮಾತನಾಡಿದ ಅವರು, ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕಾಲೇಜಿನಲ್ಲಿ ಹಮ್ಮಿಕೊಂಡ ಪ್ರತಿಭಾ ಪೋಷಣೆ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಿಂದ ಪ್ರೇರಣೆ ಪಡೆದು ಸತತ ಪರಿಶ್ರಮದಲ್ಲಿ ತೊಡಗಬೇಕು ಎಂದು ತಿಳಿಸಿದರು.
ಚಿತ್ರದುರ್ಗ ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಎಂ. ವೀರೇಶ  ಮಾತನಾಡಿ, ವಿದ್ಯಾರ್ಥಿಗಳಿಗೆ ಧಾರ್ಮಿಕ ತಳಹದಿಯ ಅಗತ್ಯವಿದೆ. ಉತ್ತಮ ಶಿಕ್ಷಣ ಪಡೆದು ಒಳ್ಳೆಯ ಭವ್ಯ ಭಾರತದ ಪ್ರಜ್ಞಾವಂತ ಪ್ರಜೆಗಳಾಗಿ ಸಮಾಜದ ಮೇಲೆ ಬೆಳಕು ಚೆಲ್ಲಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ. ಎನ್.ಆರ್. ಬಾಳಿಕಾಯಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಡಾ. ಎನ್.ಜಿ. ಸಂಗಾಪುರ, ಡಾ. ಸಿ.ಎಂ. ಕಡಕೋಳ, ಡಾ. ವೈ.ಎಸ್. ಬಾರಿಗಿಡದ, ಡಾ. ಕೆ.ಎಸ್. ಶಾಂತಯ್ಯ, ಪ್ರೊ. ಎಸ್.ಎಚ್. ಪಂಚಾಕ್ಷರಿ, ಆರತಿ ಬೂದಪ್ಪನವರ ಇದ್ದರು. ಎ.ಬಿ. ಶಿರಿಯಣ್ಣ ಪ್ರಾರ್ಥಿಸಿದರು. ಡಾ. ಕೆ.ಎಸ್. ಶಾಂತಯ್ಯ ಸ್ವಾಗತಿಸಿದರು. ಅಶ್ವನಿ ನಾಗತ್ರಿ ಕಾರ್ಯಕ್ರಮ ನಿರೂಪಿಸಿದರು. ಡಾ. ಎಸ್.ಎಚ್. ಪಂಚಾಕ್ಷರಿ ವಂದಿಸಿದರು.
ಅನಂತರ ಅನ್ನಭಾಗ್ಯ ಯೋಜನೆ ಕುರಿತು ಚರ್ಚಾಸ್ಪರ್ಧೆ, ಅರ್ಥ ಜಿಜ್ಞಾಸೆ, ಲಿಖಿತ ರಸಪ್ರಶ್ನೆ ಸ್ಪರ್ಧೆ, ಅರ್ಥ ವಿಶ್ಲೇಷಣೆ ನಡೆದವು. ಅವಳಿನಗರದ 20ಕ್ಕೂ ಹೆಚ್ಚು ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement