ಕುಂದಗೋಳ: ಕ್ಷೀರಭಾಗ್ಯಕ್ಕೆ ವೆಂಕನಗೌಡ ಚಾಲನೆ
ಕುಂದಗೋಳ: ಇಂದಿನ ಮಕ್ಕಳಿಗೆ ಅತ್ಯುಪಯುಕ್ತವಾದ ಹಾಲು ಬಹುಮುಖ್ಯವಾಗಿದ್ದು, ಇದರಿಂದಾಗಿ ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ರಾಜ್ಯ ಸರ್ಕಾರ ಕೈಗೊಂಡ ಕ್ಷೀರಭಾಗ್ಯ ಯೋಜನೆ ಸದುಪಯೋಗಪಡಿಸಿಕೊಳ್ಳಲು ಜಿಪಂ ಸದಸ್ಯ ವೆಂಕನಗೌಡ ಹಿರೇಗೌಡ್ರ ಕ್ಷೀರಭಾಗ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ತಾಲೂಕಿನ ಗುಡಗೇರಿ ಗ್ರಾಮದ ಸರ್ಕಾರಿ ಪ.ಚ.ಮ ಸರ್ಕಾರಿ ಸಂಯುಕ್ತ ಪಪೂ ಕಾಲೇಜು ಪ್ರೌಢಶಾಲೆ ವಿಭಾಗದಲ್ಲಿ ಕ್ಷೀರಭಾಗ್ಯ ಯೋಜನೆ ಉದ್ಘಾಟಿಸಿದರು. ಉಪಪ್ರಾಚಾರ್ಯ ಭೈರವಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಎನ್.ಎಚ್. ಮಾಯಕೊಂಡ, ಪಿ.ಎಸ್. ಅಂಗಡಿ, ಗಿರೀಶ ಹಿರೇಮಠ, ವಾಸುದೇವ ಮುರಗಿ, ಇನ್ನೂ ಅನೇಕರು ಹಾಜರಿದ್ದರು. ಎಂ.ಎಸ್. ತಿರ್ಲಾಪುರ ನಿರೂಪಿಸಿದರು, ಪಿ.ಸಿ. ಮುಳ್ಳೊಳ್ಳಿ ವಂದಿಸಿದರು.