ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕ್ಷೀರಭಾಗ್ಯ ಸದುಪಯೋಗ ಪಡೆಯಿರಿ: ಈಶ್ವರ

Mainashree
Updated On : 1 Sept 2013, 11:28 am

ಕುಂದಗೋಳ: ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ರಾಜ್ಯ ಸರ್ಕಾರ ಕೈಗೊಂಡ ಕ್ಷೀರಭಾಗ್ಯ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಎಸ್‌ಡಿಎಂಸಿ ಅಧ್ಯಕ್ಷ ಈಶ್ವರ ಬೇವಿನಮರದ ಮಕ್ಕಳಿಗೆ ಕರೆಕೊಟ್ಟರು.
ಪಟ್ಟಣದ ಅಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಅನಿತಾ ದೊಡಮನಿ, ಸದಸ್ಯರಾದ ಮಾರುತಿ ನಾಗಣ್ಣವರ, ಮಾರುತಿ ಬೇವಿನಮರದ, ನಾಗರಾಜ ಗುಡೆಮ್ಮನವರ, ಬಸವರಾಜ ದೊಡಮನಿ, ಕೃಷ್ಣಾ ಕಾಲವಾಡ, ರತ್ನಾ ಗುಡೇಮ್ಮನವರ, ಸುನಂದಾ ಭೋವಿ, ಮಂಜುಳಾ ಜೋಗಮ್ಮನವರ, ರೇಷ್ಮಾ ಹನಸಿ, ಯಮನವ್ವ ಹರಣಶಿಕಾರಿ, ಲಕ್ಷ್ಮೀ ಲಮಾಣಿ, ಈರಪ್ಪ ನಾಗಣ್ಣವರ ಇದ್ದರು. ಮುಖ್ಯೋಪಾಧ್ಯಾಯ ಆರ್.ಎಸ್. ದೇವರಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಡಿ. ವಾಡೇಕರ ಸ್ವಾಗತಿಸಿದರು. ಡಿ.ಪಿ. ಗುಡಿಮನಿ ವಂದಿಸಿದರು. ವಿ.ಸಿ. ಪಟ್ಟಣಶಟ್ಟಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement