ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸುದ್ದಿ ಸಂಕ್ಷೇಪ

Mainashree
Updated On : 1 Sept 2013, 11:29 am

ನರ್ಸಿಂಗ್ ಸಿಬ್ಬಂದಿ ನೇಮಕಾತಿ ಸಂದರ್ಶನ
ಹುಬ್ಬಳ್ಳಿ: ಅಹ್ಮದಾಬಾದ್‌ನ ಎಚ್‌ಸಿಜಿ ಗ್ಲೋಬಲ್ ಮಲ್ಟಿ ಸ್ಪೇಷಲಿಟಿ ಆಸ್ಪತ್ರೆಯಲ್ಲಿ ನರ್ಸಿಂಗ್ ಸಿಬ್ಬಂದಿ ನೇಮಕಾತಿಗಾಗಿ ಸೆ. 4ರಂದು ನಗರದಲ್ಲಿ ಕ್ಯಾಂಪಸ್ ಸಂದರ್ಶನ ನಡೆಯಲಿದೆ. ವಿದ್ಯಾನಗರದಲ್ಲಿರುವ ಕೆಎಲ್‌ಇ ಸೊಸೈಟಿಯ ನರ್ಸಿಂಗ್ ವಿಜ್ಞಾನ ಕಾಲೇಜಿನಲ್ಲಿ ಅಂದು ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಸಂದರ್ಶನ ಜರುಗಲಿದೆ. ನರ್ಸಿಂಗ್ ಕೋರ್ಸ್ ಪೂರ್ಣಗೊಳಿಸಿರುವ ಹಾಗೂ ಅಂತಿಮ ವರ್ಷದ ಶಿಕ್ಷಣ ಪಡೆಯುತ್ತಿರುವ ಆಸಕ್ತರು ಈ ಕ್ಯಾಂಪಸ್ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಮಾಹಿತಿಗೆ ಮೊ: 99450 76768 ಸಂಪರ್ಕಿಸಲು ಕೋರಲಾಗಿದೆ.
ಮಾಧ್ಯಮಗಳು ಸಮಾಜ ತಿದ್ದಲು ಪ್ರಯತ್ನಿಸಲಿ
ಧಾರವಾಡ: ಸಮಾಜದಲ್ಲಿ ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳಿರುವುದು ಸಾಮಾನ್ಯ. ಮಾಧ್ಯಮಗಳು ಕೇವಲ ಸಕಾರಾತ್ಮಕ ಅಂಶಗಳೆಡೆಗೆ ಗಮನ ಹರಿಸಿ ಸಮಾಜವನ್ನು ತಿದ್ದಲು ಪ್ರಯತ್ನಿಸಬೇಕು ಎಂದು ವಿಆರ್‌ಎಲ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ವಿಜಯ ಸಂಕೇಶ್ವರ ಅಭಿಪ್ರಾಯಪಟ್ಟರು. ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂಹವನ ಮತ್ತು ಪತ್ರಿಕೋದ್ಯಮ ವಿಭಾಗದ ವಾರ್ಷಿಕ ಪಠ್ಯೇತರ ಚಟುವಟಿಕೆಗಳನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜವನ್ನು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ಯಾವುದೇ ಒತ್ತಡ ಹಾಗೂ ಆಮಿಷಗಳಿಗೆ ಶರಣಾಗದೇ ಶಿಸ್ತಿನ ಯೋಧನಂತೆ ಕಾರ್ಯನಿರ್ವಹಿಸುವ ಕ್ಷಮತೆ ಪತ್ರಕರ್ತರು ಮೈಗೂಡಿಸಿಕೊಳ್ಳಬೇಕು ಎಂದರು. ಮಾಧ್ಯಮ ವಿದ್ಯಾರ್ಥಿಗಳು ಹೆಚ್ಚೆಚ್ಚು ಓದಿದಂತೆ ಉತ್ತಮವಾಗಿ ಬರೆಯಲು ಸಾಧ್ಯ. ಹಾಗಾಗಿ ಪ್ರತಿಯೊಬ್ಬರೂ ಆಳವಾದ ಅಧ್ಯಯನ ಮಾಡಬೇಕು. ಪ್ರತಿಯೊಬ್ಬ ಪತ್ರಕರ್ತನೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಭಾಷೆಯ ಮೇಲೆ ಹೆಚ್ಚಿನ ಪ್ರಾವೀಣ್ಯತೆ ಸಾಧಿಸಬೇಕೆಂದು ತಿಳಿಸಿದರು. ವಿಭಾಗದ ಮುಖ್ಯಸ್ಥ ಡಾ. ಎ.ಎಸ್. ಬಾಲಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. ಡಾ. ಎಂ. ಗಂಗಾಧರಪ್ಪ ಮತ್ತು ಡಾ. ಸಂಜಯಕುಮಾರ ಮಾಲಗತ್ತಿ ಇದ್ದರು. ಸೋಮಶೇಖರ ಕಟ್ಟೆಣ್ಣವರ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ತಳವಾರ ನಿರೂಪಿಸಿದರು. ಜೀತೆಂದ್ರ ಕಾಂಬಳೆ ವಂದಿಸಿದರು.
'ಮಹಾವೀರ ರತ್ನ
2013' ಪುರಸ್ಕಾರ
ಹುಬ್ಬಳ್ಳಿ: ಹಿರಿಯ ವೈದ್ಯ ಡಾ.ಆರ್.ಬಿ. ಪಾಟೀಲ ಅವರಿಗೆ ಮಹಾವೀರ ಯುಥ್ ಫೆಡರೇಶನ್ ವತಿಯಿಂದ ಸೆ. 1ರಂದು 'ಮಹಾವೀರ ರತ್ನ-2013' ಪುರಸ್ಕಾರ ನೀಡಿ ಸನ್ಮಾನಿಸಲಾಗುತ್ತಿದೆ. ನಗರದ ಕಂಚಗಾರ ಓಣಿಯಲ್ಲಿರುವ ಮಹಾವೀರ ಭವನದಲ್ಲಿ ಈ ಸನ್ಮಾನ ಸಮಾರಂಭ ನಡೆಯಲಿದೆ. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಮತ್ತು ಪರಿಸರ ಸುರಕ್ಷೆ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ ಪ್ರತಿ ವರ್ಷ ಈ ಪುರಸ್ಕಾರ ನೀಡಿ ಸನ್ಮಾನಿಸಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement