ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಹಕ್ಕುಚ್ಯುತಿ ಮಂಡಿಸಿದ್ರೆ ಹೋರಾಟ

Vishwanath S
Updated On : 3 Dec 2013, 11:12 am

ಧಾರವಾಡ: ಶ್ರೀನಿವಾಸಪುರ ಶಾಸಕ ರಮೇಶಕುಮಾರ ತಮ್ಮ ವಿರುದ್ಧ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡನೆ ಮಂಡಿಸುವುದರಿಂದ ತಾವು ನಡೆಸುತ್ತಿರುವ ಹೋರಾಟ ನಿಲ್ಲಿಸಲ್ಲ ಎಂದು ಸಮಾಜ ಪರಿವರ್ತನ ಸಮುದಾಯದ ಸಂಸ್ಥಾಪಕ ಎಸ್.ಆರ್. ಹಿರೇಮಠ ಹೇಳಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ರಮೇಶಕುಮಾರ ನಡೆಸಿದ ಅಕ್ರಮ ಭೂ ಕಬಳಿಕೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ರಮೇಶಕುಮಾರ ವಿಧಾನಸಭೆಯಲ್ಲಿ ತಮ್ಮ ವಿರುದ್ಧ ದಾಖಲೆಗಳಿಲ್ಲದೆ ಹಕ್ಕುಚ್ಯುತಿ ಮಂಡನೆ ಸಲ್ಲಿಸಿದ್ದಾರೆ. ಅವರ ಆಪಾದನೆ ನಿರಾಧಾರವಾಗಿದೆ. ಇದು ಸರಿಯಾದ ಕ್ರಮ ಅಲ್ಲ ಎಂದರು. ಭೂಕಬಳಿಕೆ, ಅಕ್ರಮ ಗಣಿಗಾರಿಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ತಾವು ಯಾವುದೇ ವ್ಯಕ್ತಿಗಳ ಮೇಲೆ ದಾಖಲೆ ಸಹಿತ ಆರೋಪ ಮಾಡಿದ್ದೇವೆ. ಶಾಸಕಾಂಗದ ಮೇಲೆ ತಮಗೆ  ಸಂಪೂರ್ಣ ನಂಬಿಕೆ ಇದೆ. ರಮೇಶಕುಮಾರ ಮಂಡಿಸಿದ ಹಕ್ಕು ಚ್ಯುತಿ ಕುರಿತು ಸೂಕ್ತ ರೀತಿ ನಿರ್ಧಾರ ತೆಗೆದುಕೊಳ್ಳುವ ಭರವಸೆ ತಮಗಿದೆ ಎಂದರು. ಭೀತಿ ಹುಟ್ಟಿಸುವುದಕ್ಕಾಗಿ ತಮ್ಮ ವಿರುದ್ಧ ಹಕ್ಕುಚ್ಯುತಿ ಮಂಡಿಸಲಾಗಿದೆ. ಇಂತಹ ಬೆದರಿಕೆಗೆ ವಿಚಲಿತರಾಗುವುದಿಲ್ಲ. ಅದರಂತೆ ಅಕ್ರಮ ಭೂಕಬಳಿಕೆದಾರರ ವಿರುದ್ಧ ಹೋರಾಟ ಮುಂದುವರೆಸಲಾಗುವುದು. ಪ್ರತಿ ವಾರವೂ ಅಕ್ರಮ ಭೂ ಕಬಳಿಕೆ ಮತ್ತು ಗಣಿಗಾರಿಕೆ ಕುರಿತು ನಿದರ್ಶನ ಬಿಡುಗಡೆ ಮಾಡುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement