ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಚಿತ್ರದ ಹೆಸರು ಬದಲಾವಣೆಗೆ ಆಗ್ರಹ

Vishwanath S
Updated On : 5 Dec 2013, 11:12 am

ಹುಬ್ಬಳ್ಳಿ: ದಾಸಶ್ರೇಷ್ಠ ಕನಕದಾಸರ ಘನತೆಗೆ ಧಕ್ಕೆಯನ್ನುಂಟು ಮಾಡುವಂತಿರುವ ಆಲ್ ಇನ್ ಒನ್ ಕನಕದಾಸ ಚಿತ್ರದ ಹೆಸರನ್ನು ಕೂಡಲೇ ಬದಲಾಯಿಸಬೇಕು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ಪುನೀತ ಕಲ್ಲಣ್ಣವರ ಆಗ್ರಹಿಸಿದ್ದಾರೆ.
ಚಿತ್ರಕ್ಕೆ ಆಲ್ ಇನ್ ಒನ್ ಕನಕದಾಸ ಹೆಸರನ್ನಿಟ್ಟಿರುವುದರಿಂದ ಕನಕದಾಸರ ಅನುಯಾಯಿಗಳಿಗೆ ತುಂಬಾ ನೋವಾಗಿದೆ ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು. ಪ್ರೇಮ ಕಥೆ ಹೊಂದಿರುವ ಈ ಚಿತ್ರಕ್ಕೆ ಮಹಾನ್ ದಾರ್ಶನಿಕರ ಹೆಸರಿನಿಟ್ಟಿರುವುದು ಕನಕದಾಸರ ಘನತೆಗೆ ಚ್ಯುತಿಯನ್ನುಂಟು ಮಾಡಿದಂತಾಗಿದೆ ಎಂದ ಅವರು ಚಿತ್ರ ನಿರ್ದೇಶಕರು ಸಹಾ ಕನಕದಾಸ ಟೈಟಲ್ ಇಲ್ಲದಿದ್ದರೆ ಚಿತ್ರ ಮಾಡಲು ಸಾಧ್ಯವಿಲ್ಲ ಎಂದು ಮೊಂಡುತನದ ಉತ್ತರ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಕನಕದಾಸರ ಹೆಸರಿನಿಂದಲೇ ಚಿತ್ರ ನಿರ್ಮಾಣ ಮಾಡಿದ್ದರೆ ಸಂಘದ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ ಕಲ್ಲಣ್ಣವರ, ದಾರ್ಶನಿಕರ ಹೆಸರುಗಳನ್ನು ಚಲನಚಿತ್ರಗಳಿಗೆ ಹೆಸರಿಸುವಾಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರು ಈ ನಿಟ್ಟಿನಲ್ಲಿ ಚಿಂತಿಸಬೇಕೆಂದರು. ಕೇವಲ ಮನೋರಂಜನೆಗಾಗಿ ಮಹಾನ್ ದಾರ್ಶನಿಕರ ಹೆಸರುಗಳನ್ನು ಹೆಸರಿಸುವ ಮೂಲಕ ಸಮಾಜದ ಸ್ವಾಸ್ಥ್ಯ ಹಾಳಾಗದಂತೆ ನಿರ್ದೇಶಕರುಗಳಿಗೆ ಮಂಡಳಿ ಎಚ್ಚರಿಕೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಹನುಮಂತಪ್ಪ ಕಂಬಳಿ, ರಾಜೇಶ, ವಿಜಯಕುಮಾರ, ಚಿತ್ತರಂಜನ ಕಲ್ಲಣ್ಣವರ, ಗುರುಶಾಂತಗೌಡ ಪಾಟೀಲ, ಕಲ್ಲಪ್ಪ ಹುಬ್ಬಳ್ಳಿ, ಮಾಲತೇಶ ಗುಡೇನಕಟ್ಟಿ ಪತ್ರಿಕಾಗೋಷ್ಠಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement