ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಜಮೀನುಗಳಿಗೆ ಲಗ್ಗೆಯಿಡುವ ವನ್ಯ ಜೀವಿಗಳು

Vishwanath S
Updated On : 5 Dec 2013, 11:12 am

ಕಲಘಟಗಿ: ತಾಲೂಕಿನ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲೀಗ ವನ್ಯಜೀವಿ ಬೇಟೆಗಾರರ ಹೆಚ್ಚಳದಿಂದ ಕಾಡುಹಂದಿ, ಜಿಂಕೆಗಳು ಅರಣ್ಯಕ್ಕೆ ಹೊಂದಿಕೊಂಡಿರುವ ರೈತರ ಜಮೀನುಗಳಿಗೆ ಲಗ್ಗೆಯಿಟ್ಟಿವೆ. ಕಳೆದ ಎರಡು ವಾರಗಳಿಂದಲೂ ಸ್ಥಳೀಯ, ಹೊರ ಜಿಲ್ಲೆಯ ಬಂದೂಕುದಾರಿ ಈ ಬೇಟೆಗಾರರು, ತಾಲೂಕಿನ ಅರಣ್ಯ ಪ್ರರ್ದೇಶಕ್ಕೆ ಹೊಂದಿಕೊಂಡಿರುವ ಗಳಗಿಹುಲಕೊಪ್ಪ, ಹುಲ್ಲಂಬಿ, ತಂಬೂರ, ಬೆಂಡಲಗಟ್ಟಿ ಮುಂತಾದ ಗ್ರಾಮಗಳಲ್ಲಿ ನಂಬರ್ ಪ್ಲೇಟ್ ಅರ್ಧ ಕಾಣುವ ಕಾರ, ದ್ವಿಚಕ್ರ ವಾಹನಗಳಲ್ಲಿ ಮುಂಜಾನೆ ಮತ್ತು ಮುಸ್ಸಂಜೆ ವೇಳೆಯಲ್ಲಿ ಬಿಡಾರ ಹೂಡುತ್ತಿರುವುದಾಗಿ ಅಲ್ಲಿನ ಕೃಷಿ ಕಾರ್ಮಿಕರು, ದನಗಾಯಿಗಳು, ಜಮಿನುಗಳಲ್ಲಿ ವಾಸವಾಗಿರುವ ರೈತರು ತಿಳಿಸುತ್ತಾರೆ. ಇದೇ ಸರದಿಯಲ್ಲಿ ನಿರಂತರವಾಗಿ ಕಾಡು ಹಂದಿ ಬೇಟೆ ನಡೆದಿದೆ. ಅದರ ಮಾಂಸವನ್ನು ತಾಲೂಕು ಕೇಂದ್ರದಲ್ಲಿ ರು. 500ಗೆ ಕೆಜಿಯಂತೆ ಮಾರಾಟ ಮಾಡುವ ಜಾಲವಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಕೊರತೆಯಿಂದಾಗಿ ವನ್ಯಜೀವಿ ಬೇಟೆಗಾರರಿಗೆ, ಮರಗಳ್ಳರಿಗೆ ಮಣ್ಣು ಕಳ್ಳಸಾಗಾಣಿಕೆದಾರರಿಗೆ ರಹದಾರಿಯಾಗಿದೆ ಎಂದು ಜನರು ಆರೋಪಿಸುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement