ಪ್ರೋತ್ಸಾಹಧನಕ್ಕಾಗಿ ಅರ್ಜಿ
ಧಾರವಾಡ: ಅಲೆಮಾರಿ, ಅರೆ ಅಲೆಮಾರಿ ಜನಾಂಗದ 5ನೇ ತರಗತಿಯಿಂದ ಮೇಲ್ಪಟ್ಟ ವಿದ್ಯಾಭ್ಯಾಸ ಮಾಡುತ್ತಿರುವ ವಿವಿಧ ಜನಾಂಗದ ವಿದ್ಯಾರ್ಥಿಗಳಿಗಾಗಿ ವಿಶೇಷ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಪ್ರೋತ್ಸಾಹ ಧನದ ಅರ್ಜಿಗಳಾಗಿ ಆಯಾ ತಾಲೂಕಿನ ಬಿಸಿಎಮ್ ವಿಸ್ತರಣಾ ಧಿಕಾರಿ ಕಚೇರಿಯಿಂದ ಪಡೆದು ವಿವರಗಳೊಂದಿಗೆ ಅರ್ಜಿ ಭರ್ತಿ ಮಾಡಿ ಡಿ. 31ರೊಳಗೆ ಕಚೇರಿಗೆ ಸಲ್ಲಿಸಲು ಕೋರಲಾಗಿದೆ. ಅರ್ಜಿ ಫಾರ್ಮ್ಗಳು ವಿಸ್ತೀರ್ಣಾಧಿಗಳ ಕಚೇರಿಯಿಂದ ಉಚಿತವಾಗಿ ಲಭ್ಯವಿವೆ. ಮಾಹಿತಿಗೆ ಮೊಸಂ- 9845218568 ಅಥವಾ 9845669581 ಸಂಪರ್ಕಿಸಲು ಕೋರಲಾಗಿದೆ, ಅಲೆಮಾರಿ, ಅರೆ ಅಲೆಮಾರಿ ಪಟ್ಟಿಯಲ್ಲಿ ಗುರುತಿಸಿದ ಜಾತಿಗಳಾದ ಗೊಂದಳಿ, ಗೊಲ್ಲ, ಶಿಕ್ಕಲಿಗೇರ್, ಹೆಳವ, ಬೈಲ್ಪತ್ತಾರ್, ಡವರಿ, ಜೋಗಿ, ದುರ್ಗಮುರ್ಗಿ, ಘೀಸಾಡಿ, ಬೈರಾಗೀ, ಕಿಳ್ಯೆಕ್ಯಾತ, ಪಿಚಗುಂಟಲ ಮತ್ತು ಇನ್ನುಳಿದ ಜನಾಂಗಗಳ ವಿದ್ಯಾರ್ಥಿಗಳು ಈ ಪ್ರೋತ್ಸಾಹಧನದ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಅಲೆಮಾರಿ, ಅರೆ ಅಲೆಮಾರಿ ವಿಮುಕ್ತ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಗುರುನಾಥ ಹುಲಗೂರ ತಿಳಿಸಿದ್ದಾರೆ.