ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅದ್ಧೂರಿಯಾಗಿ ಉತ್ಸವ ಆಚರಿಸಿ

Mainashree
Updated On : 11 Dec 2013, 12:04 pm

ನವಲಗುಂದ: ನಗರದ ಹೃದಯ ಭಾಗವಾದ ಶ್ರೀಕಂಠಶಾಸ್ತ್ರಿ ಕಲಾಭವನದಲ್ಲಿ ಡಿ. 14ರಂದು ಅದ್ಧೂರಿಯಾಗಿ ಜಿಲ್ಲಾ ಉತ್ಸವ ಆಚರಿಸುವಂತೆ ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.
ತಾಪಂ ಸಭಾಭವನದಲ್ಲಿ ನಡೆದ ಧಾರವಾಡ ಜಿಲ್ಲಾ ಉತ್ಸವ ಕಾರ್ಯಕ್ರಮ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಉತ್ಸವಕ್ಕೆ ಸಾಹಿತಿಗಳು, ಗಣ್ಯರು, ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು, ಎಲ್ಲ ಇಲಾಖೆ ಅಧಿಕಾರಿಗಳು ಸಹಾಯ ಸಹಕಾರ ನೀಡಬೇಕೆಂದು ತಿಳಿಸಿದರು.
ತಹಸೀಲ್ದಾರ್ ಕೆ.ಎಲ್. ಭಜಂತ್ರಿ ಜಿಲ್ಲಾ ಉತ್ಸವ ಕುರಿತು ಪ್ರಾಸ್ತಾವಿಕ ಮಾತನಾಡಿ, ಜಿಲ್ಲಾ ಉತ್ಸವದ ರೂಪರೇಷಗಳ ಬಗ್ಗೆ ಮಾಹಿತಿ ನೀಡಿದರು. ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಬಿ. ಕೊಪ್ಪದ, ಕಸಾಪ ಅಧ್ಯಕ್ಷ ಎಸ್.ಎಂ. ಮೆಣಸಿನಕಾಯಿ, ಕಲಾವಿದರು, ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಡಿ. 14ರಂದು ಬೆ. 9-30ರಿಂದ ನಗರದ ಗಣಪತಿ ದೇವಸ್ಥಾನದಿಂದ ಶ್ರೀ ಕಂಠಶಾಸ್ತ್ರಿ ಕಲಾಭವನದವರೆಗೆ ಜಿಲ್ಲಾ ಉತ್ಸವ ಅಂಗವಾಗಿ ಭವ್ಯ ಮೆರವಣಿಗೆ ನಡೆಯುವುದು. ಮೆರವಣಿಗೆಯಲ್ಲಿ ತಾಲೂಕಿನ ಜಾನಪದ ತಂಡಗಳು, ಡೊಳ್ಳಿನ ಮೇಳ, ಝಾಂಝಮೇಳ, ಕರಡಿ ಮಜಲು, ಕೋಲಾಟ ತಂಡಗಳು, ಸಾಹಿತಿಗಳು, ಸ್ತ್ರೀ ಶಕ್ತಿ ಗುಂಪುಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಉತ್ಸವಕ್ಕೆ ಮೆರುಗು ತರಬೇಕೆಂದು ತಹಸೀಲ್ದಾರರು ವಿನಂತಿಸಿದರು. ಬಿ.ಬಿ. ಹೊನ್ನಕುದರಿ ನಿರೂಪಿಸಿದರು. ಎ.ಆರ್. ಅಕ್ಕಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement