ಜೆಎಸ್ಎಸ್ ಕಾಲೇಜಿಗೆ ಸಮಗ್ರ ವೀರಾಗ್ರಣಿ
ಧಾರವಾಡ: ಕರ್ನಾಟಕ ವಿವಿ ಅಂತರ್ ಕಾಲೇಜು ಅಥ್ಲೆಟಿಕ್ಸ್ ಕೂಟದಲ್ಲಿ ಜೆಎಸ್ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆಯಿತು.
12 ಚಿನ್ನ, ಎರಡು ಬೆಳ್ಳಿ ಪದಕ ಮುಡಿಗೇರಿಸಿಕೊಂಡ ಜೆಎಸ್ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಸಮಗ್ರ ವೀರಾಗ್ರಣಿ ಪ್ರಶಸ್ತಿಗೆ ಪಾತ್ರವಾಯಿತು. ಎಂಟು ಚಿನ್ನ, ಆರು ಬೆಳ್ಳಿ, 3 ಕಂಚಿನ ಪದಕ ಗೆದ್ದ ಕರ್ನಾಟಕ ಕಲಾ ಮಹಾವಿದ್ಯಾಲಯ ಪುರುಷರ ವಿಭಾಗದಲ್ಲಿ ತಂಡ ಪ್ರಶಸ್ತಿಗೆ ಪಾತ್ರವಾದರೆ, ಮಹಿಳೆಯರ ವಿಭಾಗದಲ್ಲಿ ಎಂಟು ಚಿನ್ನ, ಎರಡು ಬೆಳ್ಳಿ ಪದಕ ಗೆದ್ದುಕೊಂಡ ಜೆಎಸ್ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರವು ತಂಡ ಪ್ರಶಸ್ತಿ ಪಡೆಯಿತು.
ಫಲಿತಾಂಶದ ವಿವರ: ಪುರುಷರ ವಿಭಾಗ: 100 ಮೀ. ಓಟದಲ್ಲಿ ಜೆಎಸ್ಎಸ್ ಕಾಲೇಜಿನ ಬಾನಾಜಿ ರಾಜು, ಕೆಸಿಡಿಯ ಆರ್. ಕುಮಾರ, ಕುಮಟಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂದೀಪ ನಾಯ್ಕ, 20 ಕಿ.ಮೀ. ನಡಿಗೆಯಲ್ಲಿ ಹೊನ್ನಾವರ ಎಂಪಿಇ ಎಸ್ಡಿಎಂ ಕಾಲೇಜಿನ ಅಣ್ಣಪ್ಪ ನಾಯ್ಕ, ಜೆಎಸ್ಎಸ್ ಕಾಲೇಜಿನ ಅಕ್ಷಯ ತಳವಾರ, ಗದಗ ಎಚ್ಸಿಇಎಸ್ಎಸ್ ಕಾಲೇಜಿನ ವೀರೇಶ ಗುಳೇದ, 21 ಕಿಮೀ ಅರೆ ಮ್ಯಾರಾಥಾನ್ನಲ್ಲಿ ಕೆಸಿಡಿಯ ಲಿಂಗರಾಜ ಹಳಿಯಾಳ, ಜೆಎಸ್ಎಸ್ನ ಗಂಗಪ್ಪ ತಂಬೂರ, ಕೆಸಿಡಿಯ ಸುನೀಲ ಕಟ್ಟೀಮನಿ, 400 ಮೀ. ಹರ್ಡಲ್ಸ್ನಲ್ಲಿ ಜೆಎಸ್ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಗಣೇಶ ನಾಯ್ಕ, ಕೆಸಿಡಿಯ ಫಕೀರಪ್ಪ ಬಾಂಗಿ, ಪರಶುರಾಮ ಭಜಂತ್ರಿ, ಹ್ಯಾಮರ್ ಥ್ರೋನಲ್ಲಿ ಕೆಸಿಡಿ ಮಂಜುನಾಥ ಗದ್ದೆಣ್ಣವರ, ಶಿರಸಿ ಎಂಎಂ ಕಾಲೇಜಿನ ಎಚ್.ಕೆ. ನಚಿಕೇತ, ಭಟ್ಕಳ ಅಂಜುಮನ್ ಕಾಲೇಜಿನ ಆರ್ಫಾ,ಪೋಲ್ವಾಲ್ಟ್ನಲ್ಲಿ ಹೊನ್ನಾವರ ಎಂಪಿಇಯ ಎಸ್ಡಿಎಂ ಕಾಲೇಜಿನ ಕುಮಾರ ನಾಯ್ಕ, ಭಟ್ಕಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹರೀಶ ನಾಯ್ಕ, ಹೊನ್ನಾವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿನೋದ ನಾಯ್ಕ, 400 ಮೀ. ರಿಲೇಯಲ್ಲಿ ಕರ್ನಾಟಕ ಕಲಾ ಮಹಾವಿದ್ಯಾಲಯ (ಪರಶುರಾಮ ಭಜಂತ್ರಿ, ಪರಸಪ್ಪ ಹಳಿಜೋಳ, ಲಿಂಗರಾಜ ಹಳಿಯಾಳ, ಸುನೀಲ ಕಟ್ಟೀಮನಿ), ಜೆಎಸ್ಎಸ್ ಕಾಲೇಜು (ರವಿ ಬಂಡಿವಡ್ಡರ, ಮೃತ್ಯುಂಜಯ ಗುತ್ತಲಮಠ, ಅರುಣ ಸವಣೂರ, ಗಂಗಪ್ಪ ತಂಬೂರ), 3. ಕಾರವಾರ ಸರ್ಕಾರಿ ಕಾಲೇಜು (ಅಕ್ಷಯ ನಾಯ್ಕ, ರವಿ ಹಾವನೂರ, ವಿನಾಯಕ ಗುನಗಿ, ಸಂಜಯ ಗೌಡ) ಕ್ರಮವಾಗಿ ಪ್ರಥಮ, ದ್ವಿತೀಯ ತೃತೀಯ ಸ್ಥಾನ ಪಡೆದುಕೊಂಡರು.