ಜಿಲ್ಲಾ ಉತ್ಸವ: ಪಾರ್ಕಿಂಗ್ ವ್ಯವಸ್ಥೆ
ಧಾರವಾಡ: ಜಿಲ್ಲಾ ಉತ್ಸವ ನಿಮಿತ್ತ ಮುಖ್ಯ ವೇದಿಕೆಯಾದ ಕರ್ನಾಟಕ ಕಲಾ ಕಾಲೇಜಿಗೆ ಬರುವ ವಾಹನಗಳಿಗೆ ವಿವಿಧ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಮಾಡಲಾಗಿದೆ.
ಕರ್ನಾಟಕ ಕಾಲೇಜಿನಿಂದ ದಾಸನಕೊಪ್ಪ ವೃತ್ತದವರೆಗೆ ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್, ಸಪ್ತಾಪುರ ಸತ್ಯಸಾಯಿಬಾಬಾ ಮಹಾವಿದ್ಯಾಲಯದ ಆವರಣ ಹಾಗೂ ಆಲೂರ ವೆಂಕಟರಾವ್ ಸಭಾಭವಣದ ಪಕ್ಕದಲ್ಲಿರುವ ಬಿಇಡಿ ಕಾಲೇಜು ಆವರಣವನ್ನು ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್ಗೆ ಮೀಸಲಿಡಲಾಗಿದೆ.
ಕರ್ನಾಟಕ ಕಾಲೇಜಿನಿಂದ ಎಲ್ಐಸಿ ಕಚೇರಿ ರಸ್ತೆಯ ಎಡ ಭಾಗ, ಕರ್ನಾಟಕ ಕಾಲೇಜಿನಿಂದ ಹಳಿಯಾಳ ನಾಕಾವರೆಗೆ ಒಂದು ಬದಿಗೆ ದ್ವಿಚಕ್ರ ವಾಹನ ಪಾರ್ಕಿಂಗ್ ಮಾಡಬಹುದು. ಕರ್ನಾಟಕ ಕಾಲೇಜು ಮುಖ್ಯದ್ವಾರದಿಂದ ವಾಹನಗಳಿಗೆ ಪ್ರವೇಶವಿಲ್ಲ. ಉದಯ ಹಾಸ್ಟೇಲ್ ಸರ್ಕಲ್ನಿಂದ ಕರ್ನಾಟಕ ಕಾಲೇಜಿನೊಳಗೆ ಗಣ್ಯರ, ಕಲಾವಿದರ ಹಾಗೂ ಸಮನ್ವಯ ಅಧಿಕಾರಿಗಳ ವಾಹನಗಳಿಗೆ ಮಾತ್ರ ಪ್ರವೇಶವಿದೆ ಎಂದು ಪೊಲೀಸ್ ಆಯುಕ್ತ ಪಿ.ಎ. ಪದ್ಮನಯನ ತಿಳಿಸಿದ್ದಾರೆ.