ನಗರಕ್ಕೆ ಬಂದಿಳಿದ ಕರ್ನಾಟಕ ತಂಡ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಡಿ. 12
ಇಲ್ಲಿಯ ರಾಜನಗರ ಕೆಎಸ್‌ಸಿಎ ಮೈದಾನದಲ್ಲಿ ಡಿ. 14ರಿಂದ ಪಂಜಾಬ್ ತಂಡದ ವಿರುದ್ಧ ರಣಜಿ ಪಂದ್ಯವಾಡಲು ಕರ್ನಾಟಕ ತಂಡ ಗುರುವಾರ ರಾತ್ರಿ 9 ಗಂಟೆಗೆ ಬೆಂಗಳೂರಿನಿಂದ ವಿಮಾನದ ಮೂಲಕ ಹುಬ್ಬಳ್ಳಿಗೆ ಬಂದಿಳಿಯಿತು.
ವಿಮಾನ ನಿಲ್ದಾಣದಿಂದ ವಿಶೇಷ ಬಸ್‌ನಲ್ಲಿ ಗೋಕುಲ ರಸ್ತೆಯ ಹೋಟೆಲ್ ಡೆನ್ನಿಸನ್ಸ್‌ಗೆ ಆಗಮಿಸಿದ ಕರ್ನಾಟಕ ತಂಡದ ಆಟಗಾರರು, ತರಬೇತಿದಾರರು ಹಾಗೂ ಕೋಚ್‌ರನ್ನು ಹೋಟೆಲ್ ಸಿಬ್ಬಂದಿ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು.
ಹುಬ್ಬಳ್ಳಿಯ ರಣಜಿ ಪಂದ್ಯದ ಆಟಗಾರರನ್ನು ಗುರುವಾರ ರಾತ್ರಿ ಪ್ರಕಟಿಸಿರುವ ಕರ್ನಾಟಕ ತಂಡ, ಶುಕ್ರವಾರ ಬೆಳಗ್ಗೆ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ನೆಟ್ ಅಭ್ಯಾಸ ನಡೆಸಲಿದೆ.
ಗುರುವಾರ ಬೆಳಗ್ಗೆ ನೆಟ್ ಅಭ್ಯಾಸ ನಡೆಸಿರುವ ಪಂಜಾಬ್ ತಂಡ, ಶುಕ್ರವಾರ ಮಧ್ಯಾಹ್ನ ಅಭ್ಯಾಸಕ್ಕಿಳಿಯುವ ಸಾಧ್ಯತೆ ಇದೆ.
ಪಂಜಾಬ್ ತಂಡ ತಂಗಿರುವ ಹೋಟೆಲ್ ಗೇಟ್ ವೇ ಹಾಗೂ ಕರ್ನಾಟಕ ತಂಡ ತಂಗಿರುವ ಹೋಟೆಲ್ ಡೆನ್ನಿಸನ್ಸ್‌ಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಕರ್ನಾಟಕ ತಂಡದ ಆಟಗಾರರು: ವಿನಯಕುಮಾರ (ನಾಯಕ), ಸಿ.ಎಂ. ಗೌತಮ್, ಮಯಾಂಕ ಅಗರವಾಲ್, ಮನೀಶ ಪಾಂಡೆ, ಸ್ಟುವರ್ಟ್ ಬಿನ್ನಿ, ರೋನಿತ್ ಮೋರೆ, ಗಣೇಶ, ಎ. ಮಿಥುನ್, ಶರತ್ ಎಚ್.ಎಸ್., ಕೆ.ಪಿ. ಅಪ್ಪಣ್ಣ, ಅಬ್ರಾರ್ ಖಾಜಿ, ಕರುಣ ನಾಯರ್, ಸಮರ್ಥ ಆರ್., ಶ್ರೇಯಸ್.
ಕರ್ನಲ್ ಚಿನ್ಮಯ್ (ಮ್ಯಾಚ್ ರೆಫರಿ), ಸುರೇಶ ಶಾಸ್ತ್ರಿ ಮತ್ತು ವಿವೆಲ್ ಪಾಠಕ್ (ಅಂಪೈರ್‌ಗಳು).