ಚಿತ್ರರಂಗ ಕಾರ್ಮಿಕರ ಬಾಳಿಗೆ ದಾರಿ
ಹುಬ್ಬಳ್ಳಿ: ಚಲನಚಿತ್ರರಂಗ ಪ್ರಬಲ ಮಾಧ್ಯಮವಾಗಿ ಮಾತ್ರ ಉಳಿಯದೆ ಅದೊಂದು ಉದ್ಯಮವಾಗಿ ಬೆಳೆದು ಬಂದಿದೆ. ತನ್ಮೂಲಕ ಸಾವಿರಾರು ಕಾರ್ಮಿಕರಿಗೆ ಜೀವನೋಪಾಯಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಸುರೇಶ ಕುಲಕರ್ಣಿ ಅಭಿಪ್ರಾಯ ಪಟ್ಟರು.
ಧಾರವಾಡ ಜಿಲ್ಲಾ ಉತ್ಸವದ ಅಂಗವಾಗಿ ಹುಬ್ಬಳ್ಳಿಯ ಶ್ರೀ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿರುವ 'ಚಲನ ಚಿತ್ರೋತ್ಸವ'ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತೀಯ ಚಿತ್ರರಂಗ ಶತಮಾನೋತ್ಸವದ ಸಂಭ್ರಮದಲ್ಲಿದೆ. ಚಲನ ಚಿತ್ರರಂಗ ಭಾರಿ ಏರುಪೇರುಗಳನ್ನು ಅನುಭವಿಸಿ ಬೆಳೆದಿದೆ. ಅನ್ಯರಿಗೂ ಆಸರೆಯಾಗಿದೆ ಎಂದರು.
ಚಲನ ಚಿತ್ರೋತ್ಸವ ಸಮಿತಿಯ ಅಧ್ಯಕ್ಷ ಸೋಮಶೇಖರ ಜಾಡರ ಮಾತನಾಡಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕ ಶಶಿ ಸಾಲಿ, ಸಮಿತಿಯ ಉತ್ತಮ ಹಾಗೂ ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಬಾಚಿಕೊಂಡ ಚಿತ್ರಗಳನ್ನು ಆಯ್ಕೆ ಮಾಡಿ ಉಚಿತ ಪ್ರದರ್ಶನ ನೀಡಿರುವುದು ಪ್ರಶಂಸನೀಯ ಎಂದರು. ಎಂ. ಸಿ. ಚೆಟ್ಟಿ, ಎಂ. ಎಸ್. ಹೊಸಳ್ಳಿಮಠ ಇದ್ದರು.