ಅವ್ವ ಟ್ರಸ್ಟ್ನ ಸಮಾಜಮುಖಿ ಸೇವೆ ಶ್ಲಾಘನೀಯ: ಹಿರೇಮಠ
ಗದಗ: ಮಾಜಿ ಶಿಕ್ಷಣ ಸಚಿವ ಹಾಗೂ ವಿಪ ಸದಸ್ಯ ಬಸವರಾಜ ಹೊರಟ್ಟಿ ಅವರ ನೇತೃತ್ವದ ಅವ್ವ ಸೇವಾ ಟ್ರಸ್ಟ್ ಕಳೆದ 5 ವರ್ಷದಿಂದ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ನೊಂದವರ ಹಾಗೂ ಅಂಧ, ಅಂಗವಿಕಲರ ಧ್ವನಿಯಾಗಿ ಪ್ರತಿಭಾವಂತರ ಪ್ರೋತ್ಸಾಹಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಹೇಳಿದರು.
ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಅವ್ವ ಸೇವಾ ಟ್ರಸ್ಟ್ನ 2014ರ ದಿನದರ್ಶಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಅತಿಥಿಗಳಾಗಿ ಆಗಮಿಸಿದ್ದ ಜ. ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ ಮಾತನಾಡಿ, ಅವ್ವ ಸೇವಾ ಟ್ರಸ್ಟ್ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಅವರ ಬಾಳಲ್ಲಿ ಬೆಳಕು ಮೂಡಿಸಿದೆ. 5 ವರ್ಷದಿಂದ ಅವರ ನೇತೃತ್ವದ ಅವ್ವ ಸೇವಾ ಟ್ರಸ್ಟ್ ಸಮಾಜದ ಮಧ್ಯೆ ಎಲೆಮರೆಯ ಕಾಯಿಯಾಗಿ ಸೇವೆ ಸಲ್ಲಿಸುತ್ತಿರುವ ಮಹನೀಯರನ್ನು, ನೊಂದವರನ್ನು, ಅಂಧ ಅನಾಥರನ್ನು ಗೌರವಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಬಸವರಾಜ ಧಾರವಾಡ ಪ್ರಾಸ್ತಾವಿಕ ಮಾತನಾಡಿದರು. ಮಾಧ್ಯಮಿಕ ಶಾಲೆ ನೌಕರರ ಸಂಘದ ಅಧ್ಯಕ್ಷ ಎಸ್.ಎಂ. ಕೊಟಗಿ, ಬಿ.ಕೆ. ಪಾಟೀಲ, ಬಿ.ಆರ್. ಪಾಟೀಲ, ಐ.ಜಿ. ಪುಲ್ಲಿ, ಎಸ್.ಆರ್. ಹೂಗಾರ, ಎಂ.ಎಸ್. ಕುಲಕರ್ಣಿ, ಎಂ.ಕೆ. ನಿಂಬನಗೌಡ್ರ, ಮಹೇಶಗೌಡ ಪಾಟೀಲ, ಎಂ.ವಿ. ಹಿರೇಮಠ ಇತರರು ಉಪಸ್ಥಿತರಿದ್ದರು. ಎಂ.ಎಸ್. ಚಿನ್ನೂರ ಸ್ವಾಗತಿಸಿದರು. ಎಸ್.ಎಂ. ಅಗಡಿ ವಂದಿಸಿದರು.
-
ತೆರಿಗೆ ವಿವರಕ್ಕೆ ತ್ರೈಮಾಸಿಕ ಪದ್ಧತಿ ಅಳವಡಿಸಿ: ವಸಂತ
ಹುಬ್ಬಳ್ಳಿ: ಮೌಲ್ಯವರ್ಧಿತ ತೆರಿಗೆಯಡಿ ಸರ್ಕಾರಕ್ಕೆ ಸಲ್ಲಿಸುವ ತೆರಿಗೆ ವಿವರ ಸಲ್ಲಿಕೆಯನ್ನು ಮಾಸಿಕದಿಂದ ತ್ರೈಮಾಸಿಕ ಪದ್ಧತಿಗೆ ವರ್ಗಾಯಿಸಬೇಕು ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ವಸಂತ ಲದವಾ ಹೇಳಿದರು. ಇಲ್ಲಿನ ಕ್ಲರ್ಕ್ ಇನ್ ಹೊಟೇಲ್ನಲ್ಲಿ ಸ್ಮಾಲ್ ಇಂಡಸ್ಟ್ರಿಸ್ ಡೆವಲ್ಪಮೆಂಟ್ ಬೋರ್ಡ್ ಆಫ್ ಇಂಡಿಯಾದೊಂದಿಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವ್ಯವಹಾರ ಮತ್ತು ಬೆಳವಣಿಗೆಗೆ ಸಿದ್ಧತೆ ಕುರಿತು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹೊರ ರಾಜ್ಯದ ಸಣ್ಣ ಕೈಗಾರಿಕೆಗಳಿಂದ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಖರೀದಿಸುವ ಉತ್ಪನ್ನಗಳ ಮೇಲೆ ರಾಜ್ಯ ಸರ್ಕಾರ ಕೇವಲ ಶೇ. 2ರಷ್ಟು ಮಾತ್ರ ತೆರಿಗೆ ವಿಧಿಸುತ್ತಿದೆ. ಆದರೆ ರಾಜ್ಯದಲ್ಲಿನ ಸಣ್ಣ ಕೈಗಾರಿಕೆಗಳು ಉತ್ಪಾದಿಸುವ ಸಾಮಗ್ರಿಗಳ ಮೇಲೆ ರಾಜ್ಯ ಸರ್ಕಾರ ಶೇ. 14.5ರಷ್ಟು ಮೌಲ್ಯವರ್ಧಿತ ತೆರಿಗೆ ವಿಧಿಸುತ್ತಿದ್ದು, ಇದು ರಾಜ್ಯದ ಸಣ್ಣ ಕೈಗಾರಿಕೆಗಳ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ಹೊರ ರಾಜ್ಯದ ಸಣ್ಣ ಕೈಗಾರಿಕೆಗಳಿಂದ ಇಲ್ಲಿನ ಸರ್ಕಾರಿ ಉದ್ದಿಮೆಗಳು ಖರೀದಿಸುವ ವಸ್ತುಗಳ ಮೇಲೆ ನಿಯಂತ್ರಣ ಹೇರುವ ಜೊತೆಗೆ ರಾಜ್ಯದ ಸಣ್ಣ ಕೈಗಾರಿಕೆಗಳ ಉತ್ಪನ್ನಗಳ ಮೇಲೆ ವಿಧಿಸುತ್ತಿರುವ ತೆರಿಗೆ ಪದ್ಧತಿ ಪರಾಮರ್ಶಿಸಬೇಕು ಎಂದು ತಿಳಿಸಿದರು. ರಾಜ್ಯ ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ವಿಧಿಸುತ್ತಿರುವುದರಿಂದ ರಾಜ್ಯದ ವಹಿವಾಟು ಹೊರ ರಾಜ್ಯದ ಕೈಗಾರಿಕೆಗಳಿಗೆ ಹರಿದು ಹೋಗುತ್ತಿದ್ದು ಇದನ್ನು ತಡೆಗಟ್ಟಿ ರಾಜ್ಯದಲ್ಲಿನ ಸಣ್ಣ ಕೈಗಾರಿಕೆಗಳಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದರು. ಡಿ.ಆರ್.ಸುಬ್ರಮಣ್ಯ ಸ್ವಾಗತಿಸಿದರು. ಬಿವಿಬಿ ಕಾಲೇಜು ಪ್ರಾಂಶುಪಾಲ ಡಾ. ಅಶೋಕ ಶೆಟ್ಟರ್, ಸಿದ್ದೇಶ್ವರ ಕಮ್ಮಾರ ಇನ್ನಿತರರು ಇದ್ದರು.