ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಶೈಕ್ಷಣಿಕ ನಾಯಕತ್ವ ಅಗತ್ಯ

Lingaraj Badiger
Updated On : 17 Dec 2013, 12:04 pm

ಧಾರವಾಡ: ಶಾಲೆ ಒಂದು ನಿರ್ದಿಷ್ಟ ವಿದ್ಯಾ ವ್ಯಾಸಂಗದ ವ್ಯವಸ್ಥೆ. ಆ ವ್ಯವಸ್ಥೆಯಲ್ಲಿ ಯಶಸ್ವಿ ನಿರ್ವಹಣೆಯೊಂದಿಗೆ ಗುಣಾತ್ಮಕ ಬದಲಾವಣೆ ಕಾಣಲು ಮುಖ್ಯ ಶಿಕ್ಷಕರಲ್ಲಿ ಶೈಕ್ಷಣಿಕ ನಾಯಕತ್ವ ಅಗತ್ಯವೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಸಿದ್ಧರಾಮ ಮನಹಳ್ಳಿ ಅಭಿಪ್ರಾಯ ಪಟ್ಟರು.
ಡಯಟ್ ಆವರಣದಲ್ಲಿರುವ ರಾಜ್ಯ ಶಾಲಾ ಹೊಣೆಗಾರಿಕೆ, ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣಾ ಸಂಸ್ಥೆ (ಸಿಸ್ಲೆಪ್-ಕರ್ನಾಟಕ) ಬೆಂಗಳೂರು ಹಾಗೂ ಮೈಸೂರು ವಿಭಾಗದ ಸರ್ಕಾರಿ ಪ್ರೌಢ ಶಾಲೆಗಳ ಪ್ರೊಬೇಷನರಿ ಮುಖ್ಯಾಧ್ಯಾಪಕರಿಗಾಗಿ ಹಮ್ಮಿಕೊಂಡ 6 ದಿನಗಳ 3ನೇ ಹಂತದ ಆಡಳಿತ ನಾಯಕತ್ವ, ಸಾಮಾನ್ಯ ಬುನಾದಿ ತರಬೇತಿ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ವೃತ್ತಿ ಜೀವನದಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಕನಸುಗಳಿರಬೇಕು. ತಾವು ಹೊಂದಿದ ಕನಸುಗಳನ್ನು ನನಸು ಮಾಡುವಲ್ಲಿ ವಿಧಾಯಕವಾದ ದಾಸೋಹ ಪರಿಕಲ್ಪನೆಯ ಸಂಕಲ್ಪಗಳಿರಬೇಕಾಗುತ್ತದೆ ಎಂದೂ ಮನಹಳ್ಳಿ ಕಿವಿಮಾತು ಹೇಳಿದರು.
ಮುಖ್ಯ ಅತಿಥಿ ಡಯಟ್ ನಿವೃತ್ತ ಪ್ರಾಚಾರ್ಯ ಎ. ಎನ್. ನಾಗರಳ್ಳಿ, ಇಲಾಖಾ ಪ್ರಣೀತ ಅನೇಕ ವಿದ್ಯಾವಿಕಾಸ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ನಿರಂತರ ಕ್ರಿಯಾಶೀಲ ಸ್ಪಂದನೆ ಹಾಗೂ ಸರ್ಕಾರದ ಚಿಂತನೆಯಲ್ಲಡಗಿದ ಶೈಕ್ಷಣಿಕ ಆಶಯಗಳ ಆಳವಾದ ಅಧ್ಯಯನವನ್ನು ಮುಖ್ಯ ಶಿಕ್ಷಕರು ಮಾಡುವ ಮೂಲಕ ತುಳಿಯುವ ಎಲ್ಲ ಹೆಜ್ಜೆಗಳಲ್ಲಿ ಗೆಲುವು ಕಾಣಬೇಕು ಎಂದರು.
ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಸಿಸ್ಲೆಪ್-ಕರ್ನಾಟಕದ ಹಿರಿಯ ಸಹಾಯಕ ನಿರ್ದೇಶಕ ಆರ್. ಎಸ್. ಮುಳ್ಳೂರ ಸ್ವಾಗತಿಸಿದರು. ಉಪನ್ಯಾಸಕಿ ಪಾರ್ವತಿ ವಸ್ತ್ರದ ನಿರೂಪಿಸಿದರು. ಸಿಸ್ಲೆಪ್ ಸಹಾಯಕ ನಿರ್ದೇಶಕ ಅಶ್ವಿನ್ ವಂದಿಸಿದರು. ಅಧ್ಯಾಪಕಿ ಗಾಯತ್ರಿ ಕಾಮಕರ ಇದ್ದರು. ಶಿಬಿರದಲ್ಲಿ ಬೆಂಗಳೂರು ಮತ್ತು ಮೈಸುರು ಕಂದಾಯ ವಿಭಾಗಗಳಿಂದ ಒಟ್ಟು 66 ಪ್ರೊಬೇಷನರಿ ಮುಖ್ಯಾಧ್ಯಾಪಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement