ಕೆಯುಡಿ, ಮಿಶ್ರಿಕೋಟಿಯಲ್ಲಿ ಪೊಲೀಸ್ ಠಾಣೆ
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಹೊರ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೇರಿಸುವುದು ಹಾಗೂ ಮಿಶ್ರಿಕೋಟಿಯಲ್ಲಿ ನೂತನ ಪೊಲೀಸ್ ಠಾಣೆ ಆರಂಭಿಸಲಾಗುವುದು ಎಂದು ಪೊಲೀಸ್ ಮಹಾ ನಿರ್ದೇಶಕ ಲಾಲ್ ರೊಖುಮ ಪಚಾವೊ ಹೇಳಿದರು.
ಇಲ್ಲಿನ ಉತ್ತರ ಪ್ರಾಂತ ಸಭಾದಲ್ಲಿ ಮಂಗಳವಾರ ನಡೆದ ಕ್ರಿಸ್ಮಸ್ ಹಬ್ಬದ ಸಮಾರಂಭಕ್ಕೂ ಮುಂಚೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಹಳ ದಿನಗಳ ಬೇಡಿಕೆಯಾಗಿರುವ ಈ ಪೊಲೀಸ್ ಠಾಣೆಗಳನ್ನು ಸದ್ಯದಲ್ಲಿ ಸ್ಥಾಪಿಸಲಾಗುವುದು ಎಂದರು. ಇದಕ್ಕೂ ಮುನ್ನ ಸೋಮೇಶ್ವರ ಬಳಿ ಪೊಲೀಸ್ ತರಬೇತಿ ಕೇಂದ್ರ, ಪೊಲೀಸ್ ಮಕ್ಕಳ ವಸತಿ ಶಾಲೆಗೆ ಭೇಟಿ ನೀಡಿದರು. ಸಭಾಪ್ರಾಂತದ ಪಾದ್ರಿ ರೆ. ಕ್ರಿಸ್ಟೋಪರ್ವಕ್ಟರ ಜಾರ್ಜ್, ಆರ್.ಜೆ. ನಿರಂಜನ, ವಿಲ್ಸನ್ ಮೈಲಿ ಇದ್ದರು.
--