ಮುದ ನೀಡಿದ ಭಾವಗೀತ ಗಾಯನ
ಧಾರವಾಡ: ಡಾ. ದ. ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿ ಇತ್ತೀಚೆಗೆ ಸಾಧನಕೇರಿಯ ಬೇಂದ್ರೆ ಭವನದಲ್ಲಿ ಮಾಸಿಕ ಭಾವಗೀತ ಗಾಯನ ಯಶಸ್ವಿಯಾಗಿ ಜರುಗಿತು. ಸುರಭಿ ಸುಗತೆ ಮತ್ತು ಪಾವನಾ ಹಂಚಿನಮನಿ ಪ್ರಸ್ತುತಪಡಿಸಿದ ಅಂಬಿಕಾತನಯದತ್ತರ ರಚನೆಗಳಾದ ದೇಹಮೊಂದು ದೇವವೀಣೆ, ಹಳ್ಳದ ದಂಡ್ಯಾಗ, ಯಾಕೊ ಕಾಣೆ ರುದ್ರವೀಣೆ, ನಾವು ಬರ್ತೇವಿನ್ನ ನೆನಪಿರಲಿ ತಾಯಿ ಮುಂತಾದ ಭಾವಪೂರ್ಣ ಕವಿತೆಗಳು ಮತ್ತು ಎಂ.ಎನ್. ವ್ಯಾಸರಾವ್, ವೇದವ್ಯಾಸ ಜೋಶಿ, ವಿ.ಸಿ. ಐರಸಂಗ ಮೊದಲಾ ಹಿರಿಯ ಕವಿಗಳ ಕವಿತೆಗಳನ್ನು ಪ್ರಸ್ತುತಪಡಿಸಲಾಯಿತು. ಜಯಂತಿ ಕರಿ ಕ್ಯಾಸಿಯೋ ಮತ್ತು ಮೌನೇಶ ಪತ್ತಾರ ತಬಲಾ ಸಾಥ್ ನೀಡಿದರು. ಟ್ರಸ್ಟ್ ಸದಸ್ಯ ನರಸಿಂಹ ಪರಾಂಜಪೆ ನಿರೂಪಿಸಿದರು.