ಇಂದು ದತ್ತಮಂದಿರದಲ್ಲಿ ಶ್ರೀ ಚಕ್ರಶಿಖರಕ್ಕೆ ಕುಂಭಾಭಿಷೇಕ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಡಿ. 18
ಹಳೇ ಹುಬ್ಬಳ್ಳಿ ಕಿಲ್ಲೆಯಲ್ಲಿರುವ ಶ್ರೀ ದತ್ತ ಮಂದಿರದಲ್ಲಿ ಶ್ರೀ ಚಕ್ರಶಿಖರಕ್ಕೆ ಕುಂಭಾಭಿಷೇಕದ ಅಂಗವಾಗಿ ಡಿ. 19ರಿಂದ 23ರ ವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಡಿ. 19ರ ಬೆಳಗ್ಗೆ 6.30ಕ್ಕೆ ಶ್ರೀ ದತ್ತ ಮಹಾರಾಜರ ಪಾದುಕೆಯೊಂದಿಗೆ ನಗರ ಸಂಕೀರ್ತನೆ ಮುಖಾಂತರ ಸುತ್ತಲಿನ ದೇವಸ್ಥಾನಗಳಿಗೆ ಫಲಫುಷ್ಪ ಸಮರ್ಪಣೆ, ಬೆಳಗ್ಗೆ 8ಕ್ಕೆ ತಡಸ ಗಾಯತ್ರಿ ತಪೋಭೂಮಿಯ ಶ್ರೀ ಬಾಲಕೃಷ್ಣಾಂದ ಸರಸ್ವತಿ ಸ್ವಾಮೀಜಿ ಅವರಿಂದ ಧ್ವಜಾರೋಹಣ, ಬೆಳಗ್ಗೆ 9ಕ್ಕೆ ಶ್ರೀ ಕೃಷ್ಣೇಂದ್ರ ಗುರುಗಳಿಗೆ ಲಘುರುದ್ರಾಭಿಷೇಕ, ಸಂಜೆ 6ಕ್ಕೆ ಸುದರ್ಶನ ಹೋಮ, ಉದಕಶಾಂತಿ ನಡೆಯುವುದು.
ಡಿ. 20ರ ಬೆಳಗ್ಗೆ 8ಕ್ಕೆ ಪುಣ್ಯಾಹವಾಚನ, ದೇವತಾ ಸ್ಥಾಪನೆ, ಸಂಜೆ 6ಕ್ಕೆ ಸಂಕಷ್ಟಿ ನಿಮಿತ್ತ ಸಹಸ್ರ ಮೋದಕ ಗಣಪತಿ ಹವನ, ಡಿ. 21ರ ಬೆಳಗ್ಗೆ 7ಕ್ಕೆ ಸಹಸ್ರ ಕುಂಭಾಭಿಷೇಕದ ಪುಣ್ಯಾಹವಾಚನ, ದೇವತಾ ಸ್ಥಾಪನೆ, 8ಕ್ಕೆ ಋತ್ವಿಕ್ವರ್ಣ, ಮಧುಪರ್ಕ ನಂತರ ಶ್ರೀ ದತ್ತ ಪಾದುಕೆಗಳಿಗೆ ಮಹಾರುದ್ರಾಭಿಷೇಕ ಪ್ರಾರಂಭ, 10ಕ್ಕೆ ಶ್ರೀ ದತ್ತ ಮಹಾಯಾಗ, ಶ್ರೀ ಸೂಕ್ತ ಹವನ, ಪವಮಾನ ಹವನ, ಮಧ್ಯಾಹ್ನ 12ಕ್ಕೆ ನೈವೇದ್ಯ, ಆರತಿ, ಮಹಾಪ್ರಸಾದ ವಿತರಣೆ, ಸಂಜೆ 7ಕ್ಕೆ ವೇದ ವಿದ್ವಾನ್ ಋತ್ವಿಜರಿಂದ ಅಷ್ಟಾವಧಾನ ಸೇವೆ ಜರುಗುವುದು.
ಡಿ. 22 ರಂದು ಬೆಳಗ್ಗೆ 7ಕ್ಕೆ ಮಹಾರುದ್ರಾಭಿಷೇಕ ಪ್ರಾರಂಭ, 11ಕ್ಕೆ ಶತಚಂಡಿ ಹವನದ ಪೂರ್ಣಾಹುತಿ, ಡಿ. 23ರ ಬೆಳಗ್ಗೆ 8ಕ್ಕೆ ಕೂಡ್ಲಿ ಶೃಂಗೇರಿ ದಕ್ಷಿಣಾಮ್ನಾಯ ಸಂಸ್ಥಾನದ ಶ್ರೀ ಅಭಿನವ ವಿದ್ಯಾರಣ್ಯ ಭಾರತೀ ಸ್ವಾಮೀಜಿ ಅವರಿಂದ ಶ್ರೀ ಚಕ್ರ ಶಿಖಿರಕ್ಕೆ ಸಹಸ್ರ ಕುಂಭಾಭಿಷೇಕ, 9ಕ್ಕೆ ಮಹಾರುದ್ರಾಭಿಷೇಕ, ಶ್ರೀ ಲಲಿತ ಹೋಮ, ಶ್ರೀ ದತ್ತ ಮಹಾಯಾಗ, 11.30ಕ್ಕೆ ಸಭಾ ಕಾರ್ಯ ಹಾಗೂ ಮಧ್ಯಾಹ್ನ 1 ಗಂಟೆಗೆ ನೈವೇದ್ಯ, ಆರತಿ, ಮಹಾಪ್ರಸಾದ ವಿತರಣೆ ನಡೆಯುವುದು ಎಂದು ಪ್ರಕಟಣೆ ತಿಳಿಸಿದೆ.