ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಹೊನ್ನಳ್ಳಿಯಿಂದಭೂಮಿ ಕಬಳಿಕೆ

Mainashree
Updated On : 20 Dec 2013, 10:33 am

ಹುಬ್ಬಳ್ಳಿ: ಮುಸ್ಲಿಂ ಸಮಾಜದ ಮಕ್ಕಳ ಶಿಕ್ಷಣಕ್ಕೆ ಕಾಯ್ದಿರಿಸಿದ್ದ ಎಪಿಎಂಸಿ ಬಳಿಯ ಕೋಟ್ಯಂತರ ಮೌಲ್ಯದ ಜಾಗೆಯನ್ನು ಅಂಜುಮನ್ ಸಂಸ್ಥೆ ಅಧ್ಯಕ್ಷರೂ ಆಗಿರುವ ಮಾಜಿ ಸಚಿವ ಜಬ್ಬಾರಖಾನ್ ಹೊನ್ನಳ್ಳಿ ಕಬಳಿಸಿದ್ದಾರೆ ಎಂದು ಅಲ್ಫಲಾ ಕಲ್ಚರಲ್ ಆ್ಯಂಡ್ ಎಜ್ಯುಕೇಶನಲ್ ಸಂಸ್ಥೆ ಸದಸ್ಯ ಎಂ.ಎಂ. ಢಾಲಾಯತ್ ಆರೋಪಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಫಲಾ ಹೆಸರಿನ ಸಂಸ್ಥೆಯ ಹೆಸರನ್ನು ಹುದೇಬಿಯಾ ಎಜ್ಯುಕೇಶನ್ ಸೊಸೈಟಿ ಎಂದು ಬದಲಾಯಿಸಿಕೊಂಡು ಭೂಮಿ ಕಬಳಿಸಲಾಗಿದೆ. ಸಂಸ್ಥೆಗೆ ಸೇರಿದ್ದ ಅಮರಗೋಳದ 1 ಎಕರೆ 37 ಗುಂಟೆ ಭೂಮಿಯನ್ನು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಂಡು ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಮಾಜಿ ಸಚಿವ ಹೊನ್ನಳ್ಳಿ ನುಂಗಿ ಹಾಕಿದ್ದಾರೆ ಎಂದು ದಾಖಲೆಗಳ ಸಮೇತವಾಗಿ ಢಾಲಾಯತ್ ದೂರಿದರು.
ಅಲ್ಲದೇ, ಅಲ್ಫಲಾ ಸಂಸ್ಥೆ ಹೆಸರಿನಲ್ಲಿ 1983-90ರ ಅವಧಿಯಲ್ಲಿ ಹೊನ್ನಳ್ಳಿ ಹಾಗೂ ಎಸ್‌ಎಂ ಜೋಡಳ್ಳಿ ಇಬ್ಬರೂ ಸೇರಿ ವಿದ್ಯಾರ್ಥಿಗಳಿಂದ ಡೋನೇಶನ್ ರೂಪದಲ್ಲಿ ಸಂಗ್ರಹಿಸಿದ್ದ ರು. 25 ಲಕ್ಷವನ್ನು ದುರ್ಬಳಕೆ ಮಾಡಿದ್ದಾರೆ.
ಈ ಅಕ್ರಮ ಸಂಸ್ಥೆಯ ಗಮನಕ್ಕೆ ಬರುತ್ತಿದಂತೆಯೇ ಹೊನ್ನಳ್ಳಿ ಹಾಗೂ ಜೋಡಳ್ಳಿ ಇಬ್ಬರನ್ನೂ ಸಂಸ್ಥೆಯಿಂದ ಉಚ್ಛಾಟಿಸಲಾಯಿತ್ತಾದರೂ ರಾಜಕೀಯ ಪ್ರಭಾವ ಉಪಯೋಗಿಸಿಕೊಂಡು ಮತ್ತೆ ಅಧಿಕಾರಕ್ಕೆ ಬಂದ ಹೊನ್ನಳ್ಳಿ ಸಂಸ್ಥೆಯಲ್ಲಿ ಬಹಳಷ್ಟು ಅಕ್ರಮ ಎಸೆಗಿದ್ದಾರೆ ಎಂದರು.
ಸಂಸ್ಥೆಗೆ ಸೇರಿದ್ದ ಅಮರಗೋಳ ಬಳಿಯ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಹೊನ್ನಳ್ಳಿ ದಾವಣಗೆರೆಯ ತಮ್ಮ ದೂರದ ಸಂಬಂಧಿ ಕರಿಮುನ್ನಿಸಾ ಕೆ.ಎಚ್. ಅತಾವುಲ್ಲಾ ಎಂಬುವರಿಗೆ ರು. 6.55 ಲಕ್ಷಕ್ಕೆ ಮಾರಾಟ ಮಾಡಿರುವ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದರು.
ಅಲ್ಪಸಂಖ್ಯಾತರ ಮಕ್ಕಳ ಶಿಕ್ಷಣಕ್ಕಾಗಿ ಕಾಯ್ದಿಟ್ಟ ಆಸ್ತಿಯನ್ನು ಕಬಳಿಸಲು ಹೊನ್ನಳ್ಳಿ ಮುಂದಾಗಿದ್ದಾರೆ ಎಂಬ ಸಂಗತಿ ಬೆಳಕಿಗೆ ಬರುತ್ತಿದಂತೆಯೇ ಈ ಬಗ್ಗೆ ತಾವು ಅವಶ್ಯಕ ಮಾಹಿತಿಗೆಳನ್ನು ಕಲೆ ಹಾಕಲು ಮುಂದಾದಾಗ ರೌಡಿಗಳಿಂದ ತಮಗೆ ಜೀವ ಬೆದರಿಕೆಯನ್ನೂ ಹೊನ್ನಳ್ಳಿ ಒಡ್ಡಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ದೂರು ನೀಡಿದ್ದರೂ ಪೊಲೀಸ್ ಇಲಾಖೆ ಅವರ ವಿರುದ್ಧ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ ಎಂದೂ ಢಾಲಾಯತ್ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಹಾಗೂ ಜಿಲ್ಲಾಧಿಕಾರಿ ಸಂಸ್ಥೆಯಲ್ಲಿ ನಡೆದಿರುವ ಈ ಅಕ್ರಮದ ಬಗ್ಗೆ ಕುಲಂಕಷವಾಗಿ ಪರಿಶೀಲನೆ ನಡೆಸಲು ಮುಂದಾಗಬೇಕು. ಇಲ್ಲವಾದ್ದಲ್ಲಿ ತಾವು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸುವ ಮೂಲಕ ಸಂಸ್ಥೆಗೆ ಸೇರಿದ ಭೂಮಿಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸುವುದಾಗಿಯೂ ಅವರು ಹೇಳಿದರು.
ಹಜರತ್ ಅಲಿ ಚಾವುಸ್, ಲಾಲ್‌ಸಾಬ್ ಇಮಾರತಮಾಲೆ ಪತ್ರಿಕಾಗೋಷ್ಠಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement