ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಎರಡನೇ ದಿನಕ್ಕೆ ಕಾಲಿಟ್ಟ ಆಮರಣಾಂತ ಉಪವಾಸ

Mainashree
Updated On : 21 Dec 2013, 11:30 am

ನವಲಗುಂದ:  ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತ ಹೋರಾಟ ಸಮಿತಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಕಾರ್ಯಾಲಯದ ಎದುರು ನಡೆಸುತ್ತಿರುವ ಆಮರಣ ಉಪವಾಸ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ. ರೈತ ಮುಖಂಡರಾದ ಮಲ್ಲಿಕಾರ್ಜುನ ನವಲಗುಂದ, ಎಚ್.ಕೆ. ಲಕ್ಕಣ್ಣವರ, ಪರಮೇಶ್ವರ ಹೊಸಬಾಳ ಗುರುವಾರದಿಂದ ಕೊರೆಯುವ ಚಳಿಯಲ್ಲಿಯೇ ಉಪವಾಸ ಕೈಗೊಂಡಿದ್ದು ಆರೋಗ್ಯದಲ್ಲಿ ವ್ಯತ್ಯಯವಾಗಿದೆ ಎಂದು ವೈದ್ಯಾಧಿಕಾರಿ ಡಾ. ವಿ.ಪಿ. ಕಲ್ಲಂಗಡಿ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ವಕೀಲರಾದ ವಿ.ಪಿ. ಪಾಟೀಲ, ಬಿ.ಎಚ್. ದೇವರಡ್ಡಿ, ಬಿ.ಎಫ್. ಕೋನರಡ್ಡಿ, ಸಿ.ಎಂ. ಪಾಟೀಲ ರೈತ ಮುಖಂಡರಾದ ಬಿ.ಎಂ. ಹನಸಿ, ಎ.ಪಿ. ಗುರಿಕಾರ, ಲೋಕನಾಥ ಹೆಬಸೂರ ಬೆಂಬಲ ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement