ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕಾಪಿಕನ್-2014: ವೆಬ್‌ಸೈಟ್ ಬಿಡುಗಡೆ

Mainashree
Updated On : 21 Dec 2013, 11:30 am

ಹುಬ್ಬಳ್ಳಿ: ಕಿಮ್ಸ್‌ನಲ್ಲಿ 2014 ಮೇ 16, 17 ಹಾಗೂ 18ರಂದು ನಡೆಯಲಿರುವ ಕರ್ನಾಟಕ ರಾಜ್ಯ ಫಿಜಿಶಿಯನ್‌ಗಳ 32ನೇ ವಾರ್ಷಿಕ ಸಮ್ಮೇಳನ 'ಕಾಪಿಕನ್-2014'ರ ಹಿನ್ನೆಲೆಯಲ್ಲಿ ವಿಶೇಷವಾಗಿ ರಚಿಸಲಾದ ವೆಬ್‌ಸೈಟ್‌ನ್ನು ಶುಕ್ರವಾರ ಪ್ರೆಸ್‌ಕ್ಲಬ್‌ನಲ್ಲಿ ಬಿಡುಗಡೆಗೊಳಿಸಲಾಯಿತು.
ವೆಬ್‌ಸೈಟ್ ಬಿಡುಗಡೆ ಮಾಡಿದ ಕಾಪಿಕಾನ್ ವ್ಯವಸ್ಥಾಪಕ ನಿರ್ದೇಶಕ ಡಾ. ಜಿ.ಬಿ. ಸತ್ತೂರ ಮಾತನಾಡಿ, ಕಾಪಿಕಾನ್‌ಗಾಗಿ ವಿಶೇಷ ವೆಬ್‌ಸೈಟ್ ರಚಿಸಲಾಗಿದೆ. ಇದರಲ್ಲಿ ವೈದ್ಯರಿಗೆ ಬೇಕಾದ ಮಾಹಿತಿಯನ್ನು, ರೋಗ ನಿರ್ವಹಣೆಯ ಮಾರ್ಗದರ್ಶನಗಳನ್ನು ಪ್ರತಿ ತಿಂಗಳು ಅಪ್‌ಡೇಟ್ ಮಾಡಲಾಗುತ್ತದೆ. ಅಲ್ಲದೆ, ವೈದ್ಯರು ಸಮ್ಮೇಳನದಲ್ಲಿ ಭಾಗವಹಿಸಲು ಈ ವೆಬ್‌ಸೈಟ್ ಮುಖಾಂತರವೇ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.
ಸಮ್ಮೇಳನಕ್ಕೆ ಅಗತ್ಯ ತಯಾರಿ ಭರದಿಂದ ಸಾಗಿದೆ. ವೈದ್ಯಕೀಯ ಇತಿಹಾಸದಲ್ಲಿ ಇದೊಂದು ಅವಿಸ್ಮರಣೀಯ ಕಾರ್ಯಕ್ರಮವಾಗಲಿದೆ. ಸಮ್ಮೇಳನಕ್ಕೆ ಅಗತ್ಯ ಸಮಿತಿಗಳನ್ನು ರಚಿಸಲಾಗಿದ್ದು, ಅವರಿಗೆ ಜವಾಬ್ದಾರಿ ವಹಿಸಿಕೊಡಲಾಗಿದೆ ಎಂದು ಡಾ. ಸತ್ತೂರ ತಿಳಿಸಿದರು.
ಡಾ. ರಮೇಶ ಬಬ್ರುವಾಡ, ಡಾ. ಕೆ.ಎಚ್. ಜಿತೂರಿ, ಡಾ. ಡಿ.ಎಂ. ಕಬಾಡೆ, ಹುಬ್ಬಳ್ಳಿ-ಧಾರವಾಡ ಎಪಿಐ ಘಟಕದ ಡಾ. ಪ್ರಶಾಂತ ಹುಲಕಂಡೆ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement