ರಾಷ್ಟ್ರ ಮಟ್ಟಕ್ಕೆ ಸಹೋದರಿಯರ ಆಯ್ಕೆ
ಧಾರವಾಡ: ಕ್ರೀಡಾ ಇಲಾಖೆಯಿಂದ ನಡೆದ ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಓಡಿಸ್ಸಿ ನೃತ್ಯದಲ್ಲಿ ಧಾರವಾಡದವರಾದ ವಿಜೇತಾ ವೆರ್ಣೇಕರ ಹಾಗೂ ಕಥಕ ನೃತ್ಯದಲ್ಲಿ ಸಜನಿ ವೆರ್ಣೇಕರ ಸಹೋದರಿಯರು ಪ್ರಥಮ ಸ್ಥಾನ ಗಳಿಸಿದ್ದರು. ಈ ಇಬ್ಬರು ಸಹೋದರಿಯರು 2014ರ ಜ. 12ರಂದು ಲೂಧಿಯಾನ್ ಪಂಜಾಬದಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಯುವಜನೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನೃತ್ಯ ನಿರ್ದೇಶಕಿ ವಿದುಷಿ ಸಹನಾ ಭಟ್ ಹಾಗೂ ಪ್ರಸಾದನ ಕಲಾವಿದ ಸಂತೋಷ ಮಹಾಲೆ ಇವರ ಸಾಧನೆಗೆ ಅಭಿನಂದಿಸಿದ್ದಾರೆ.