ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

29ರಂದು ಗುರುಕಿರಣ ಸಂಗೀತ ರಸಮಂಜರಿ

Mainashree
Updated On : 22 Dec 2013, 2:35 am

ಅಣ್ಣಿಗೇರಿ: ಧಾರವಾಡ ಜಿಲ್ಲಾ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ಸಂಯೋಗದಲ್ಲಿ ಹುಬ್ಬಳ್ಳಿ ನೆಹರು ಮೈದಾನದಲ್ಲಿ  ಡಿ. 29ರಂದು ಆರ್. ಚಂದ್ರ ನಿರ್ದೇಶನದ ಬ್ರಹ್ಮ ಚಿತ್ರದ ಧ್ವನಿಸುರಳಿ ಬಿಡುಗಡೆ ಹಾಗೂ ಗುರುಕಿರಣ ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜಿಸಿದೆ. ಬ್ರಹ್ಮ ಚಿತ್ರದ ನಾಯಕ ನಟ ಉಪೇಂದ್ರ, ನಿರ್ದೇಶಕ ಪ್ರೇಮ್, ತಾಯಿನಾಡು ತಿಲಕ ಶಿವರಾಜಕುಮಾರ, ನಿರ್ಮಾಪಕ ಕೆ.ಪಿ. ಶ್ರೀಕಾಂತ, ನಟ ದುನಿಯಾ ವಿಜಯ್, ಲೂಸ್ ಮಾದ ಖ್ಯಾತಿಯ ಯೋಗೀಶ್, ನಟಿಯರಾದ ರಾಗಿಣಿ, ಪ್ರೇರಣಾ, ಅಮೂಲ್ಯಾ ಭಾಗವಹಿಸಲಿದ್ದಾರೆ. ಡಿ. 23ಕ್ಕೆ ಹುಬ್ಬಳ್ಳಿ ಖಾಸಗಿ ಹೊಟೇಲ್‌ನಲ್ಲಿ ಸಭೆ ಕರೆದಿದೆ ಎಂದು ಸಮಿತಿ ಜಿಲ್ಲಾಧ್ಯಕ್ಷ ಮಲ್ಲೇಶಪ್ಪ ಎಚ್. ಮಾಯಣ್ಣವರ ವಿನಂತಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement