ಕಲಘಟಗಿ ಪಪಂ ಮುಖ್ಯಾಧಿಕಾರಿ ಮುಂದುವರಿಸಿ
ಕಲಘಟಗಿ: ಇಲ್ಲಿನ ಪಪಂ ಮುಖ್ಯಾಧಿಕಾರಿ ರವಿ ಬಾಗಲಕೋಟೆ ಅವರ ಮೇಲೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಆರೋಪ ಮಾಡುತ್ತಿರುವುದು ಹಾಗೂ ಕಿರುಕುಳ ನೀಡುತ್ತಿರುವುದನ್ನು ವಿರೋಧಿಸಿ ಪಪಂ ಸಿಬ್ಬಂದಿ ತಹಸೀಲ್ದಾರ್ಗೆ ಮನವಿ ನೀಡಿ ಅವರನ್ನೇ ಮುಂದುವರಿಸಬೇಕೆಂದು ಆಗ್ರಹಿಸಿದ್ದಾರೆ.
ಶಿವಾಜಿ ವಾಗ್ಮೋಡೆ, ಶಿವಪ್ಪ ಮಾದರ, ಪ್ರಕಾಶ ಹೂಲಿಕಟ್ಟಿ, ನ್ಯಾಯವಾದಿ ಕೆ.ಬಿ. ಗುಡಿಹಾಳ, ಕರವೇ ತಾಲೂಕಾಧ್ಯಕ್ಷ ಅನಿಲ ಪಮ್ಮಾರ, ಎಂ.ಎಚ್. ಮೇಟಿ, ಅಶೋಕ ಲಮಾಣಿ, ವಿನಾಯಕ ಮೋತೆಣ್ಣವರ, ಯಲ್ಲಪ್ಪ ಮೇಲಿನಮನಿ, ಸಂತೋಷ ಕಟ್ಟಿಮನಿ, ಪ್ರವೀಣ ಹುಲಿಹೊಂಡ, ಸಂಜಯ ಲಮಾಣಿ, ತೇಜು ಲಮಾಣಿ, ಮಹಾದೇವ ವಾಗ್ಮೋಡೆ, ನೌಶಾದ ಝಂಡೆವಾಲೆ, ಪ್ರಕಾಶ ಲಮಾಣಿ, ರಮೇಶ ಮುಕ್ಕಲ್ ಮುಂತಾದವರು ಮನವಿ ಸಲ್ಲಿಸುವ ವೇಳೆ ಉಪಸ್ಥಿತರಿದ್ದರು.