ಹೆಚ್ಚು ಅಂಕ ಗಳಿಸಲು ಉಚಿತ ಕಾರ್ಯಾಗಾರ
ಧಾರವಾಡ: ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಲು ಸರಳ ಅಧ್ಯಯನ ತಂತ್ರ ತಿಳಿಸುವ ಕಾರ್ಯಾಗಾರವೊಂದನ್ನು ಇಲ್ಲಿಯ ಮಹಾಂತ ಮೈಂಡ್ ಪವರ್ ಅಕಾಡೆಮಿ ಡಿ. 25ರಿಂದ ಮೂರು ದಿನ ಹಮ್ಮಿಕೊಂಡಿದೆ. ಪಾಲಕರು ಮತ್ತು ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ.
ವಿದ್ಯಾವರ್ಧಕ ಸಂಘದ ಡಾ. ಬಿ.ಎಂ. ಪಾಟೀಲ ಸಭಾಭವನದಲ್ಲಿ ಸಂಜೆ 4ರಿಂದ ಬ್ಯಾಚುಗಳು ಆರಂಭವಾಗುತ್ತವೆ. ಪರಿಣಾಮಕಾರಿ ಓದುವಿಕೆ, ಸ್ಮರಣಶಕ್ತಿ ವರ್ಧನೆ, ಏಕಾಗ್ರತೆ, ಗುರಿನಿಗದಿ, ಸಮಯನಿರ್ವಹಣೆ ಸೇರಿದಂತೆ ಹಲವು ತಂತ್ರಗಳ ಬಗ್ಗೆ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗುವುದು ಎಂದು ಅಕಾಡೆಮಿ ಸಂಚಾಲಕ ಜಯದೇವ ಪೂಜಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ದೂ. 77605 79070 ಸಂಪರ್ಕಿಸಬಹುದು.