ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಜಿಎಸ್ಸೆಸ್ ನಿಧನಕ್ಕೆ ಸಂತಾಪ

Mainashree
Updated On : 24 Dec 2013, 10:51 am

ಧಾರವಾಡ: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ನಿಧನ ಹೊಂದಿದ್ದು ಧಾರವಾಡದ ಸಾಹಿತಿಗಳು, ಸಂಘ-ಸಂಸ್ಥೆಗಳು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಹಾಲ್‌ನಲ್ಲಿ ಸೋಮವಾರ ಮಧ್ಯಾಹ್ನ ಶೋಕಾಚರಣೆ ಮಾಡಲಾಯಿತು. ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಜೆ.ಎಂ. ನಾಗಯ್ಯ, ಕುಲಸಚಿವರಾದ ಡಾ. ಚಂದ್ರಮಾ ಕಣಗಲಿ, ರಾಜಶ್ರೀ ಇದ್ದರು.
ಸಾಹಿತ್ಯ ಸಂಭ್ರಮ: ಡಾ. ಜಿಎಸ್ಸೆಸ್ ನಿಧನಕ್ಕೆ ಧಾರವಾಡ ಸಾಹಿತ್ಯ ಸಂಭ್ರಮದ ವತಿಯಿಂದ ಮನೋಹರ ಗ್ರಂಥ ಮಾಲೆಯಲ್ಲಿ ಸೋಮವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಎಸ್ಸೆಸ್ ಕುವೆಂಪು ಶಿಷ್ಯರಾಗಿ ಆರಂಭಿಸಿ, ಕನ್ನಡ ಕಾವ್ಯದ ವಿವಿಧ ಪರಂಪರೆಗೆ ಸ್ಪಂದಿಸುತ್ತ, ಕನ್ನಡ ಕಾವ್ಯದಲ್ಲಿ ತಮ್ಮದೇ ಧ್ವನಿಸಾಧಿಸಿಕೊಂಡವರು. ಪ್ರತಿಭೆ, ದಕ್ಷತೆ, ಪ್ರಾಮಾಣಿಕತೆಗಳ ಅಪೂರ್ವ ಸಂಗಮವಾಗಿದ್ದ ಶಿವರುದ್ರಪ್ಪ, ಹಲವಾರು ಯೋಜನೆಗಳನ್ನು ಆರಂಭಿಸಿದವರು. ಇದೀಗ ಕಣ್ಮರೆಯಾದದ್ದು ದೊಡ್ಡ ಆದರ್ಶದ ಕಣ್ಮರೆಯಾಗಿದೆ ಎಂದು ಅಭಿಪ್ರಾಯಿಸಲಾಯಿತು. ಗಿರಡ್ಡಿ ಗೋವಿಂದರಾಜ, ಡಾ. ಚನ್ನವೀರ ಕಣವಿ, ಡಾ. ಎಂ.ಎಂ. ಕಲಬುರ್ಗಿ, ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ. ಶ್ಯಾಮಸುಂದರ ಬಿದರಕುಂದಿ, ಡಾ. ಬಾಳಣ್ಣ ಶೀಗಿಹಳ್ಳಿ, ಮಲ್ಲಿಕಾರ್ಜುನ ಹಿರೇಮಠ, ಬಿ. ಸುಕನ್ಯಾ, ಡಾ. ಹ.ವೆಂ. ಕಾಖಂಡಿಕಿ, ಎ.ಎಂ. ಖಾನ್, ಡಾ. ಶಶಿಧರ ತೋಡಕರ, ವೆಂಕಟೇಶ ಮಾಚಕನೂರ, ವೆಂಕಟೇಶ ದೇಸಾಯಿ, ಆರ್ಯ ಆಚಾರ್ಯ, ರಮಾಕಾಂತ ಜೋಶಿ, ಸಮೀರ ಜೋಶಿ, ಸಮುದ್ರ ಪಟ್ಟಣಶೆಟ್ಟಿ, ಅಶೋಕ ನಿಂಗೋಲಿ, ಹನುಮಂತ ಮೇಲಿನಮನಿ ಗೌರವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಇಂದು ನುಡಿ ನಮನ: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ನಿಧನ ಸಾಹಿತ್ಯ ಲೋಕಕ್ಕೆ ತುಂಬಲಾರದ ಹಾನಿ ಎಂದು ವಿದ್ಯಾವರ್ಧಕ ಸಂಘ ತಿಳಿಸಿದೆ. ಡಿ. 24ರ ಸಂಜೆ 7ಕ್ಕೆ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ನುಡಿನಮನ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಶಂಕರ ಹಲಗತ್ತಿ ತಿಳಿಸಿದ್ದಾರೆ. ಚಂದ್ರಕಾಂತ ಬೆಲ್ಲದ, ಡಾ. ಗುರುಲಿಂಗ ಕಾಪಸೆ, ಮೋಹನ ನಾಗಮ್ಮನವರ, ಶಂಕರ ಕುಂಬಿ, ಹನುಮಾಕ್ಷಿ ಗೋಗಿ, ಶಿವಶಂಕರ ಹಿರೇಮಠ, ಸದಾನಂದ ಕನವಳ್ಳಿ, ನಿಂಗಣ್ಣ ಕುಂಟಿ, ಹುಸೇನಬಿ ಬೀಳಗಿ, ಶಿವಶಂಕರ ಮೂಗಬಸ್ತ ಸಂತಾಪ ವ್ಯಕ್ತಪಡಿಸಿದ್ದಾರೆ. ಅಂತೆಯೇ, ಶಾಸಕರಾದ ವಿನಯ ಕುಲಕರ್ಣಿ, ಅರವಿಂದ ಬೆಲ್ಲದ, ಡಾ. ಲಿಂಗರಾಜ ಅಂಗಡಿ, ಅನಿಲ ದೇಸಾಯಿ, ಡಾ. ಡಿ.ಎಂ. ಹಿರೇಮಠ, ಶಿವಸೋಮಣ್ಣ ನಿಟ್ಟೂರ, ಈರೇಶ ಅಂಚಟಗೇರಿ ಜಿ.ಎಸ್. ಶಿವರುದ್ರಪ್ಪ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಜಿಎಸ್ಸೆಸ್ ನಿಧನಕ್ಕೆ ಸಂತಾಪ: ಜಿ.ಎಸ್. ಶಿವರುದ್ರಪ್ಪ ನಿಧನಕ್ಕೆ ಹುಬ್ಬಳ್ಳಿಯ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ. ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಲಿಂಗರಾಜ ಪಾಟೀಲ, ರಂಗಾ ಬದ್ದಿ, ಸಿದ್ದು ಮುಗಳಿಶೆಟ್ರ, ಪ್ರಕಾಶ ಗೋಡಬೋಲೆ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಜಿಲ್ಲಾ ವಕ್ತಾರ ಶ್ರೀನಿವಾಸ ಶಾಸ್ತ್ರೀ ಕಂಬನಿ ಮಿಡಿದಿದ್ದಾರೆ. ವಸಂತ ಲದವಾ, ರಮೇಶ ಪಾಟೀಲ, ಕೆ.ಡಿ. ಕೊಟೇಕರ, ಅಜ್ಜಂಪುರ ಶಟ್ರು, ಬಿ. ಶಂಭುಲಿಂಗಪ್ಪ, ಸಿದ್ದೇಶ್ವರ ಜಿ. ಕಮ್ಮಾರ, ಸುನೀಲ ರಾಯ್ ಜಿಎಸ್ಸೆಸ್ ಆತ್ಮಕ್ಕೆ ಚಿರ ಶಾಂತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಸಮತಾ ಸೇನೆ, ಕರಸೇ ಕಾರ್ಯಾಧ್ಯಕ್ಷ ಅಶೋಕ ಕಾಶೇನವರ, ಸಂ ತೋಷ ಬೋವೇರ, ಮಂಜುನಾಥ ಸಣ್ಣಕ್ಕಿ, ಲೋಹಿತ ಗಾಮನಗಟ್ಟಿ, ಸತೀಶ ಸಾತಪತಿ, ಸೋಮಶೇಖರ ಚಲವಾದಿ, ಯಲ್ಲಪ್ಪ ಬಾಗಲಕೋಟ ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement