ಬಿಟಿ ಬದನೆ: ಸಮನ್ಸ್ ಜಾರಿ
ಧಾರವಾಡ: ಸಂಬಂಧಿಸಿದ ಇಲಾಖೆಗಳ ಅನುಮತಿ ಇಲ್ಲದೇ ಬಿಟಿ ಬದನೆ ಸಂಶೋಧನೆ ಕೈಗೊಂಡ ಧಾರವಾಡದ ಕೃಷಿ ವಿವಿ ಕುಲಪತಿ ಹಾಗೂ ಇನ್ನಿತರರ ವಿರುದ್ಧ ಸಲ್ಲಿಕೆಯಾಗಿದ್ದ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರಿಗೆ ಜೆಎಂಎಫ್ಸಿ ಸೋಮವಾರ ಸಮನ್ಸ್ ಜಾರಿ ಮಾಡಿದೆ. ಕೃವಿವಿ ಪ್ರಭಾರಿ ಕುಲಪತಿ ಡಾ. ಎಚ್.ಎಸ್. ವಿಜಯಕುಮಾರ ಹಾಗೂ ವಿಶ್ರಾಂತ ಕುಲಪತಿ ಡಾ. ಆರ್.ಆರ್. ಹಂಚಿನಾಳ ಹಾಗೂ ಡಾ. ಎಸ್.ಎ.ಪಾಟೀಲ ಅವರು ಸೋಮವಾರ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಿ ಈ ಹಿಂದೆ ನೀಡಿದ್ದ ನಿರೀಕ್ಷಣಾ ಜಾಮೀನಿನ ಅನ್ವಯ ಶೂರಿಟಿ ಸಲ್ಲಿಸಿದರು. ಶೂರಿಟಿ ಅಂಗೀಕರಿಸಿದ ನ್ಯಾಯಾಲಯ ಮೂವರಿಗೂ ಮುಂದಿನ ದಿನಾಂಕದಂದು ಮತ್ತೇ ಖುದ್ದಾಗಿ ಹಾಜರಾಗಲು ಸಮನ್ಸ್ ಜಾರಿಗೊಳಿಸಿತು.