ಕುಟುಂಬ ಅಭಿವೃದ್ಧಿಯಿಂದ ಗ್ರಾಮ ಸುಧಾರಣೆ
ಕಲಘಟಗಿ: ಸದೃಢ ಕುಟುಂಬವೇ ಸ್ವಾಸ್ಥ್ಯ ಸಮಾಜದ ಭದ್ರ ಬುನಾದಿ. ಪ್ರತಿಯೊಂದು ಕುಟುಂಬ ಅಭಿವೃದ್ಧಿ ಹೊಂದಿದಾಗ ಮಾತ್ರ ಗ್ರಾಮಗಳ ಸುಧಾರಣೆ ಸಾಧ್ಯ ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಗೀತಾ ಮರಲಿಂಗಣ್ಣವರ ಹೇಳಿದರು.
ತಾಲೂಕಿನ ಕೂಡಲಿಗಿ ಗ್ರಾಮದ ಶ್ರೀ ಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಜರುಗಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಂ.ಡಿ. ನೇಮಣ್ಣವರ ಮಾತನಾಡಿ, ಮಹಿಳೆಯರಲ್ಲಿ ಎಲ್ಲ ವಿಧದ ಕಾರ್ಯಗಳನ್ನ್ನು ಮಾಡುವ ಸಾಮರ್ಥ್ಯವಿದ್ದು, ಅದಕ್ಕೆ ಸಂಸ್ಥೆ ತಕ್ಕ ತರಬೇತಿ ಹಾಗೂ ಮಾರ್ಗದರ್ಶನ ನೀಡುತ್ತಿರುವುದು ಶ್ಲಾಘನೀಯ ಎಂದರು.್ನ
ಸಂಸ್ಥೆಯ ಸಮನ್ವಯಾಧಿಕಾರಿ ಮಂಜುಳಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಸದಸ್ಯ ಬಾಳಪ್ಪ ಪೋಕಳೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೂಡಲಗಿ ಮತ್ತು ಸಂಗಮೇಶ್ವರ ಒಕ್ಕೂಟದ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಚಂಪಾವತಿ ಗಾಣಿಗೇರ, ಮೀನಾಕ್ಷಿ ಗಾರಗಿ, ಗುಲಾಬಿ ಗುಣಾರಿ, ರುಕ್ಮಾ ಪಾದ್ರಿ, ಈಶ್ವರಪ್ಪ ರಾಚೋಟ್ಕರ, ಸರೋಜಾ ಸಾವಂತ, ಹಮೀದಾ ಅದರಗುಂಚಿ, ಮನೀಷಾ ಡೊಂಗ್ರೆ, ರೇಣುಕಾ ದಳವಿ, ಅನುಸೂಯಾ ಬಾಬ್ರಿ ಮುಂತಾದವರು ಭಾಗವಹಿಸಿದ್ದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಂಸ್ಥೆಯ ಮೇಲ್ವಿಚಾರಕ ಕೇಶವ ನಿರೂಪಿಸಿದರು. ಮಧು ಗಾರಗಿ ವಂದಿಸಿದರು.