ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಫೆ. 23ಕ್ಕೆ ಮಾದರ ಮಹಾಸಭಾ

Vishwanath S
Updated On : 25 Dec 2013, 12:55 pm

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಡಿ. 24
ಮಾದರ ಮಹಾಸಭಾ ರಾಜ್ಯಮಟ್ಟದ ಬೃಹತ್ ಸಮಾವೇಶ 2014ರ ಫೆ. 23ರಂದು ನಗರದ ನೆಹರು ಮೈದಾನದಲ್ಲಿ ನಡೆಯಲಿದೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ನಡೆದ ರಾಜ್ಯಮಟ್ಟದ ಮಾದರ ಚಿಂತನಾ ಸಭೆಯಲ್ಲಿ ಬೃಹತ್ ಸಮಾವೇಶದ ಕುರಿತು ಚರ್ಚಿಸಲಾಯಿತು.
ಸಮಾಜದ ಸುಮಾರು 2 ಲಕ್ಷ ಜನರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದು, ಇದಕ್ಕಾಗಿ ರಾಜ್ಯಾದ್ಯಂತ ಮಾದರ ಚನ್ನಯ್ಯ ಜ್ಯೋತಿ ಜಾಗೃತಿ ಯಾತ್ರೆ ಆಯೋಜಿಸಲು ತೀರ್ಮಾನಿಸಲಾಯಿತು.
ಲೋಕಸಭೆ ಸ್ಪೀಕರ್ ಮೀರಾ, ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ರಾಜ್ಯ ಸಚಿವ ಎಚ್. ಆಂಜನೇಯ, ಮಾದರ ಸಮಾಜದ ಹಿರಿಯರು, ಶಾಸಕರು, ವಿವಿಧ ಪಕ್ಷಗಳಲ್ಲಿನ ಪ್ರಮುಖರು, ಚಿಂತಕರು, ಸಾಹಿತಿಗಳನ್ನು ಆಹ್ವಾನಿಸಲು ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ, ವಿವಿಧ ಕಾರಣಗಳಿಂದ ಸಮಾಜ ಹರಿದು ಹಂಚಿ ಹೋಗಿದೆ. ಒಬ್ಬರಿಂದ ಇಡಿ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ. ಪ್ರತಿಯೊಬ್ಬರೂ ತಮ್ಮಲ್ಲಿನ ಭಿನ್ನಾಭಿಪ್ರಾಯ ಬದಿಗೊತ್ತಿ, ಸಮಾಜದ ಸಂಘಟನೆಗೆ ಶ್ರಮಿಸುವಂತೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಆರ್.ಬಿ. ತಿಮ್ಮಾಪುರ, ಆರ್ಥಿಕ, ಶೈಕ್ಷಣಿಕ, ರಾಜಕೀಯ, ಔದ್ಯೋಗಿಕ ಮತ್ತು ಸಾಂಸ್ಕೃತಿಕವಾಗಿ ಸಮಾಜ ಅಭಿವೃದ್ಧಿ ಹೊಂದಲು ಪಕ್ಷಾತೀತವಾಗಿ ಕಾರ್ಯಮಾಡುವ ಅಗತ್ಯವಿದೆ ಎಂದು ಹೇಳಿದರು.
ವಿವಿಧ ಜಿಲ್ಲೆಯ ಮುಖಂಡರಾದ ಗುರುನಾಥ ದಾನಪುರ, ಮೋಹನ ಆಲಮೇಲಕರ, ಈರಪ್ಪ ಗಡಗುಂಟೆ, ಸಾಯಿಕುಮಾರ, ಮುತ್ತಣ್ಣ ಬೆನ್ನೂರ ಮತ್ತಿತರರು ಸಮಾಜ ಸಂಘಟನೆಗಾಗಿ ಕೈಗೊಳ್ಳಬೇಕಿರುವ ಕಾರ್ಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಾನಗರ ಪಾಲಿಕೆ ಸದಸ್ಯ ಮೋಹನ ಹಿರೇಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಂ.ಡಿ. ಬನ್ನಿಗೋಳ, ಹನುಮಂತಪ್ಪ ಮಾಲಪಲ್ಲಿ, ಡಾ. ನಿಜಲಿಂಗಪ್ಪ ಮಟ್ಟಿಹಾಳ, ಅಶೋಕ ದೊಡ್ಡಮನಿ, ಸುಜಾತಾ ದೊಡ್ಡಮನಿ, ಗಂಗಾಧರ ಪೆರೂರ, ಪ್ರೇಮನಾಥ ಚಿಕ್ಕತುಂಬಳ, ವೆಂಕಟೇಶ ನೀರಗಟ್ಟಿ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement