ಸಂಘಟನೆ ಬೆಳೆಯಲು ಸೇವಾ ಮನೋಭಾವ ಅವಶ್ಯ
ಕಲಘಟಗಿ: ಯಾವುದೇ ಸಂಘಟನೆ ಬಲಿಷ್ಠವಾಗಿ ಬೆಳೆಯಬೇಕಾದರೆ ಸೇವಾ ಮನೋಭಾವನೆ, ಶಿಸ್ತುಬದ್ಧವಾದ ಹೋರಾಟ ಅವಶ್ಯ ಎಂದು ಕ್ರೆಡಲ್ ಮಾಜಿ ಅಧ್ಯಕ್ಷ ಸಿ.ಎಂ. ನಿಂಬಣ್ಣವರ ಹೇಳಿದರು.
ಇತ್ತೀಚಿಗೆ ಪಟ್ಟಣದ ನಾಗರಿಕ ಸೇವಾ ಕೇಂದ್ರದಲ್ಲಿ ಜರುಗಿದ ಬಿಜೆಪಿ ಮಹಿಳಾ ಮೋರ್ಚಾ ತಾಲೂಕು ಘಟಕದ ಸಾಮಾನ್ಯ ಸಭೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಬೆಳೆಯಲು ಅವಕಾಶವಿದ್ದು, ಮಹಿಳೆಯರಿಗೂ ಉತ್ತಮ ಅವಕಾಶವಿದೆ. ತಾಲೂಕಿನ ಮಹಿಳೆಯರಲ್ಲಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಜಾಗೃತಿ ಮೂಡಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದರು.
ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ಮರಲಿಂಗಣ್ಣವರ ಮಾತನಾಡಿ, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮಹಿಳಾ ಘಟಕಗಳನ್ನು ್ನಪುನರ್ ರಚಿಸಲಾಗಿದ್ದು, ಯುವತಿಯರಿಗೂ ಪ್ರಾಧಾನ್ಯತೆ ನೀಡಲಾಗಿದೆ. ಜಿಲ್ಲೆಯ ಪ್ರತಿ ಗ್ರಾಮದಲ್ಲಿಯೂ ನಿಷ್ಠಾವಂತ ಮಹಿಳಾ ಕಾರ್ಯಕರ್ತರ ಘಟಕ ಸ್ಥಾಪಿಸುವ ಉದ್ದೇಶ ಹೊಂದಿದ್ದು, ನಾಯಕರು ಹಾಗೂ ಕಾರ್ಯಕರ್ತರು ಸಹಕರಿಸಬೇಕು ಎಂದು ಹೇಳದರು.
ರಾಜ್ಯ ಕಾರ್ಯಕಾರಿಣಿ ಸದಸ್ಯೆ ಮಾಲಾ ಗೋಕುಲ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಜೋಶಿ, ತಾಲೂಕು ಅಧ್ಯಕ್ಷ ವೈ.ಎನ್. ಪಾಟೀಲ ಮಾತನಾಡಿದರು. ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಬಸಮ್ಮ ಬಸರಿಕೊಪ್ಪ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಚಿಂತಾಮಣಿ, ನಾಗವೇಣಿ ಉಡುಪಿ, ಶಕುಂತಲಾ ನಾಡಗೌಡ, ಅನಿತಾ ರೊಟ್ಟಿ, ಮಾಲಾ ಮರಲಿಂಗಪ್ಪನವರ, ಚನ್ನಮ್ಮ ಗುಮ್ಮಗೋಳ, ಕಾತುನಬಿ ಹೆಬ್ಬಾಳ, ಶಾಂತಾ ಗಬ್ಬೂರ, ಸಾವಕ್ಕ ಕುರಬರ, ರೇಣುಕಾ ಜಾವೂರ, ಬೇಗಂ ನಾನಾಪುರ, ವೀರಭದ್ರಪ್ಪ ಸತ್ತೂರ, ಮಂಗಲಪ್ಪ ಲಮಾಣಿ, ಬಸಯ್ಯ ಹುಬ್ಬಳ್ಳಿಮಠ, ಮಹದೇವಪ್ಪ ಬೇರೂಡಗಿ, ಬಸವರಾಜ ಶರೇವಾಡ, ಮಹದೇವಪ್ಪ ಭೋವಿ, ಬಸವರಾಜ ಹೊನ್ನಿಹಳ್ಳಿ ಮುಂತಾದವರು ಉಪಸ್ಥಿತರಿದ್ದರು.