ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ವಿಜಯಾನಂದ ಟ್ರಾವೆಲ್ಸ್ಗೆ ವರ್ಲ್ಡ್ ಟ್ರಾವೆಲ್ ಬ್ರ್ಯಾಂಡ್ಸ್ ಪ್ರಶಸ್ತಿ

Rashmi Kasaragodu
Updated On : 27 Dec 2013, 12:59 pm

ಹುಬ್ಬಳ್ಳಿ: ಗುಣಮಟ್ಟದ ಸೇವೆಯಲ್ಲಿ ತನ್ನದೇ ಆದ ಛಾಪು ಹೊಂದಿರುವ ವಿಜಯಾನಂದ ಟ್ರಾವೆಲ್ಸ್ಗೆ 2013ನೇ ಸಾಲಿನ ಪ್ರತಿಷ್ಠಿತ 'ವರ್ಲ್ಡ್ ಟ್ರಾವೆಲ್ ಬ್ರ್ಯಾಂಡ್ ಪ್ರಶಸ್ತಿ' ಲಭಿಸಿದೆ.
ಪ್ರಯಾಣಿಕರ ಸುರಕ್ಷತೆ, ಗ್ರಾಹಕರ ಸಂತೃಪ್ತಿ, ಅತ್ಯುತ್ಕೃಷ್ಟ ಗುಣಮಟ್ಟದ ನಿರ್ವಹಣೆಯನ್ನು ಪರಿಗಣಿಸಿ ನೀಡಲಾಗಿರುವ ಈ ಪ್ರಶಸ್ತಿಯನ್ನು ಇತ್ತೀಚಿಗೆ ದೆಹಲಿಯ ಪಂಚತಾರಾ ಹೊಟೇಲ್ನಲ್ಲಿ ನಡೆದ ಸಮಾರಂಭದಲ್ಲಿ ವಿಜಯಾನಂದ ಟ್ರಾವೆಲ್ಸ್ನ ಉಪಾಧ್ಯಕ್ಷ ಪ್ರಭು ಸಾಲಗೇರಿ ಅವರು ಎನ್ಡಿಟಿವಿಯ ಹಿರಿಯ ಪತ್ರಕರ್ತ ವಿನೋದ ದುವಾ ಅವರಿಂದ ಸ್ವೀಕರಿಸಿದರು. ಬ್ರ್ಯಾಂಡ್ಸ್ ಅಕಾಡೆಮಿ ಎಂಬ ಸಂಸ್ಥೆ ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಗುಣಮಟ್ಟ, ಗ್ರಾಹಕರ ಸಂತೃಪ್ತಿ ಮನಗಂಡು ಈ ಪ್ರಶಸ್ತಿ ನೀಡುತ್ತಿದ್ದು, ದೇಶ ವಿದೇಶಗಳಲ್ಲಿ ಸಾರ್ವಜನಿಕ ಸೇವಾ ಕ್ಷೇತ್ರಗಳ ಗುಣಮಟ್ಟ ಗುರುತಿಸಿ ಬಿಗ್ ರಿಸರ್ಚ್ ಎಂಬ ಪ್ರಖ್ಯಾತ ಸಂಸ್ಥೆಯ ಮೂಲಕ ಸ್ವತಂತ್ರ ಸಮೀಕ್ಷೆ ನಡೆಸಿ ಈ ಪ್ರಶಸ್ತಿಗೆ ಆಯ್ಕೆ ಮಾಡುತ್ತದೆ.
ಪ್ರಯಾಣಿಕರಿಗೆ ಸಮರ್ಪಣೆ: 'ವಿಜಯಾನಂದ ಟ್ರಾವೆಲ್ಸ್ಗೆ' ಪ್ರತಿಷ್ಠಿತ ವರ್ಲ್ಡ್ ಬ್ರ್ಯಾಂಡ್ಸ್ ಪ್ರಶಸ್ತಿ ಲಭಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ವಿಆರ್ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ವಿಜಯ ಸಂಕೇಶ್ವರ, ಈ ಪ್ರಶಸ್ತಿಯ ಶ್ರೇಯಸ್ಸು ಗ್ರಾಹಕರಿಗೆ ಸಲ್ಲುತ್ತದೆ. ಈ ಪ್ರಶಸ್ತಿಗೆ ಪ್ರಯಾಣಿಕರ ಸಹಕಾರ ಹಾಗೂ ಸಿಬ್ಬಂದಿ ವರ್ಗದ ನಿಷ್ಠಾಪೂರ್ಣ ಸೇವೆ ಕಾರಣ ಎಂದಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement