ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಈರುಳ್ಳಿಗೆ ಬೆಂಬಲ ಬೆಲೆ ನಿಗದಿಗೆ ಕರವೇ ಒತ್ತಾಯ

Vishwanath S
Updated On : 28 Dec 2013, 11:16 am

ನವಲಗುಂದ: ಈರುಳ್ಳಿ ಕ್ವಿಂಟಲ್‌ಗೆ ರು. 6 ಸಾವಿರ ಇದ್ದರೂ ಮಧ್ಯವರ್ತಿಗಳು ರು. 600ರಿಂದ ರು. 900 ಖರೀದಿಸುತ್ತ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಗೋವಿನಜೋಳ ಕ್ವಿಂಟಲ್‌ಗೆ ರು. 1300 ಬೆಂಬಲ ಬೆಲೆ ಇದ್ದು ಮಧ್ಯವರ್ತಿಗಳು ರು. 900ರಿಂದ ರು. 1000ಕ್ಕೆ ಖರೀದಿಸುತ್ತಿದ್ದಾರೆ. ಮಧ್ಯವರ್ತಿಗಳ ಮಧ್ಯಸ್ಥಿಕೆ ತಪ್ಪಿಸಿ ಸರ್ಕಾರವೇ ನೇರವಾಗಿ ರೈತರ ಬೆಳೆ ಖರೀದಿಸಬೇಕು. ಗೋವಿನಜೋಳಕ್ಕೆ ರು. 2500, ಈರುಳ್ಳಿಗೆ ರು. 4 ಸಾವಿರ ಬೆಂಬಲ ಬೆಲೆ ನೀಡಬೇಕೆಂದು ತಾಲೂಕು ಕರವೇ ಕಾರ್ಯಕರ್ತರು ತಹಸೀಲ್ದಾರ್‌ಗೆ ಶುಕ್ರವಾರ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಾಡಿರುವ ಅನೇಕ ಕಾಮಗಾರಿಗಳು ಕಳಪೆ ಮಟ್ಟದ್ದಾಗಿವೆ. ಕಳಪೆ ಕಾಮಗಾರಿ ಮಾಡಿರುವ ಕುರಿತು ಕರವೇ ಕಾರ್ಯಕರ್ತರು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಅನೇಕ ಹೋರಾಟಗಳನ್ನು ನಡೆಸುತ್ತ ಬಂದಿದೆ. ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಕಾಮಗಾರಿಗಳನ್ನು ತಮ್ಮ ಸಹಚರರು ಮತ್ತು ಹಿತೈಷಿಗಳಿಗೆ ಕೊಡುತ್ತಾ ಅಧಿಕಾರದ ದರ್ಪ ಮೆರೆಯುತ್ತಿದ್ದಾರೆ.
ಲೋಕೋಪಯೋಗಿ ಸಚಿವರು ನವಲಗುಂದದ ಉಪವಿಭಾಗದಲ್ಲಿ 7-8 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಭಿಯಂತ ಬಿ.ಎಚ್. ಪಾಟೀಲ, ಎಸ್.ಟಿ. ಗೌಡರ, ಎಂ.ಸಿ. ಮಳಿಮಠ ಇಲ್ಲೇ ಬೇರೂರಿದ್ದಾರೆ. ಅಂಥ ಅಧಿಕಾರಿಗಳನ್ನು ತಕ್ಷಣ ವರ್ಗಾಯಿಸಿ ಬೇರೆ ಅಧಿಕಾರಿಗಳನ್ನು ತರಬೇಕೆಂದು ಒತ್ತಾಯಿಸಿದ್ದಾರೆ. ಬೇಡಿಕೆಗಳನ್ನು ಬೇಗನೆ ಈಡೇರಿಸದಿದ್ದಲ್ಲಿ ಇಲಾಖೆ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಹೇಳಿದರು. ಕರವೇ ತಾಲೂಕಾಧ್ಯಕ್ಷ ರುದ್ರೇಶ ಹಳವದ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement