ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಗಾಯಕ ಪಂ. ಎಲ್.ಕೆ. ಪಂಡಿತ್‌ಗೆಮಲ್ಲಿಕಾರ್ಜುನ ಮನ್ಸೂರ ಸಮ್ಮಾನ

Vishwanath S
Updated On : 28 Dec 2013, 11:17 am

ಕನ್ನಡಪ್ರಭ ವಾರ್ತೆ, ಧಾರವಾಡ, ಡಿ. 27
ಪ್ರತಿಷ್ಠಿತ ಡಾ. ಮಲ್ಲಿಕಾರ್ಜುನ ಮನ್ಸೂರ ಅವರ ಸಮ್ಮಾನ ಈ ಬಾರಿ ಗ್ವಾಲಿಯರ್ ಘರಾಣೆಯ ಹಿರಿಯ ಗಾಯಕ ದೆಹಲಿಯ ಪಂ. ಲಕ್ಷ್ಮಣ ಕೃಷ್ಣರಾವ್ ಪಂಡಿತ್‌ಗೆ ಸಂದಿದೆ.
ಡಾ. ಮಲ್ಲಿಕಾರ್ಜುನ ಮನ್ಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಪ್ರಶಸ್ತಿ ಪುರಸ್ಕೃತರ ಹೆಸರು ಪ್ರಕಟಿಸಿದ್ದು, ಈ ಸಮ್ಮಾನವನ್ನು ಮನ್ಸೂರ ಅವರ ಜನ್ಮದಿನಾಚರಣೆ ಅಂಗವಾಗಿ ಡಿ. 31ರ ಸಂಜೆ 6ಕ್ಕೆ ಧಾರವಾಡದ ಸೃಜನಾ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಉಮಾಶ್ರೀ ಪ್ರದಾನ ಮಾಡಲಿದ್ದಾರೆ.
ಯುವ ಪುರಸ್ಕಾರ: ಇದೇ ಸಂದರ್ಭದಲ್ಲಿ ಬಾಲ್ಯದಿಂದಲೇ ಹಿಂದೂಸ್ತಾನಿ ಸಂಗೀತದ ಒಲವು ಹೊಂದಿದ್ದ ಧಾರವಾಡದ ವಿಜಯ ಕುಮಾರ ಪಾಟೀಲ ಹಾಗೂ ಜೈಪುರ ಅತ್ರೌಲಿ ಘರಾಣೆಯ ಯುವ ಗಾಯಕಿ ಮುಂಬೈನ ಸೋನಾಲ್ ಶಿವಕುಮಾರಗೆ ಯುವ ಪುರಸ್ಕಾರ ಸಹ ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಟ್ರಸ್ಟ್ ಸದಸ್ಯರಾದ ಪ್ರೊ. ಸದಾನಂದ ಕನವಳ್ಳಿ, ಬಾಬುರಾವ್ ಹಾನಗಲ್, ಪಂ. ರಾಜಶೇಖರ ಮನ್ಸೂರ ಹಾಗೂ ನೀಲಾ ಕೊಡ್ಲಿ ಭಾಗವಹಿಸುತ್ತಾರೆ.
ಸಂಗೀತೋತ್ಸವ: ಸಮಾರಂಭದ ನಿಮಿತ್ತ ಅಂದು ಬೆಳಗ್ಗೆ ಹಾಗೂ ಸಂಜೆ ರಾಷ್ಟ್ರೀಯ ಸಂಗೀತೋತ್ಸವ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9.30ರಿಂದ ಹುಬ್ಬಳ್ಳಿಯ ಚಂದ್ರಿಕಾ ಕಾಮತ ನಂತರ ನೀಲಾ ಕೊಡ್ಲಿ ತದನಂತರ ಪಂ. ರಾಜಶೇಖರ ಮನ್ಸೂರ ಗಾಯನ ಪ್ರಸ್ತುತ ಪಡಿಸುತ್ತಾರೆ. ಮನ್ಸೂರ ಪ್ರಶಸ್ತಿ ಪ್ರದಾನದ ನಂತರ ಸಂಜೆ 7ರಿಂದ ಯುವ ಪ್ರಶಸ್ತಿ ಪುರಸ್ಕರಾದ ವಿಜಯಕುಮಾರ ಪಾಟೀಲ, ಸೋನಾಲ್ ಶಿವಕುಮಾರ, ಪಂ. ಲಕ್ಷ್ಮಣ ಕೃಷ್ಣರಾವ್ ಪಂಡಿತ ಅವರು ಗಾಯನ ಪ್ರಸ್ತುತಪಡಿಸುತ್ತಾರೆ ಎಂದು ಟ್ರಸ್ಟ್ ಅಧ್ಯಕ್ಷ ಜಿಲ್ಲಾಧಿಕಾರಿ ಸಮೀರ ಶುಕ್ಲಾ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement