ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನೂತನ ಮರಳು ನೀತಿ ಭ್ರಷ್ಟಾಚಾರಕ್ಕೆ ದಾರಿ ಮಾಡಿದೆ: ಸಂಸದ ಜೋಶಿ

Vishwanath S
Updated On : 29 Dec 2013, 12:12 pm

ಹುಬ್ಬಳ್ಳಿ: ಸರ್ಕಾರದ ನೂತನ ಮರಳು ನೀತಿ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಸಂಸದ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ತುಂಗಭದ್ರಾ ಮರಳು ಸಾಗಾಣಿಕೆದಾರರ ಸಂಘ ಗಬ್ಬೂರು ಕ್ರಾಸ್‌ನಲ್ಲಿ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಅವರು ಧರಣಿಗೆ ಬಿಜೆಪಿ ವತಿಯಿಂದ ಬೆಂಬಲ ಸೂಚಿಸಿದರು.
ಸರ್ಕಾರ ಜಾರಿ ಮಾಡಿರುವ ನೂತನ ನೀತಿ ಜನವಿರೋಧಿ ಕಾನೂನಾಗಿದೆ. ಸರ್ಕಾರ ಕಾಯ್ದೆ ಹಿಂಪಡೆಯುವ ವರೆಗೆ ಧರಣಿ ಮುಂದುವರಿಸುವಂತೆ ಸೂಚಿಸಿದರು. ಅಲ್ಲದೆ, ತಾವೂ ಕೂಡ ಈ ಕುರಿತಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು. 2013ರ ಮರಳು ನೀತಿಯನ್ನು ಹಿಂಪಡೆದು ಜನಸ್ನೇಹಿ ನೀತಿ ಜಾರಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಸಂಸದ ಪ್ರಹ್ಲಾದ್ ಜೋಶಿ ತಿಳಿಸಿದರು. ಅಲ್ಲದೆ, ಮರಳು ಸಾಗಾಣಿಕೆದಾರರ ಪ್ರತಿಭಟನೆ ಯಶಸ್ವಿಯಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಬಸವರಾಜ ಕುಂದಗೋಳ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement