ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅವಳಿನಗರದಲ್ಲಿ ಅಪರಾಧ ಪ್ರಕರಣಗಳು ಕಡಿಮೆ

Vishwanath S
Updated On : 30 Dec 2013, 12:22 pm

ಹುಬ್ಬಳ್ಳಿ: ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಂಭವಿಸುತ್ತಿರುವ ಅಪರಾಧ ಪ್ರಕರಣಗಳ ಸಂಖ್ಯೆಗಿಂತಲೂ ಹುಬ್ಬಳ್ಳಿ-ಧಾರವಾಡ ಕಮೀಷ್ನರೇಟ್‌ನಲ್ಲಿ ಸಂಭವಿಸುತ್ತಿರುವ ಸಂಖ್ಯೆ ತೀರಾ ಕಮ್ಮಿಯಾಗಿದೆ ಎಂದು ಮಹಾನಗರ ಪೊಲೀಸ್ ಆಯುಕ್ತ ರವೀಂದ್ರಪ್ರಸಾದ ಹೆಮ್ಮೆ ವ್ಯಕ್ತಪಡಿಸಿದರು.
2011 ರಿಂದ 2013ರವರೆಗೆ ಸಂಭವಿಸಿರುವ ವಿವಿಧ ರೀತಿಯ ಅಪರಾಧ ಪ್ರಕರಣಗಳ ಪಟ್ಟಿ ಮಾಡಿದ ಅವರು ಒಟ್ಟಾರೆ ಹೇಳಿದ್ದಿಷ್ಟು:
ಟ 2011ನೇ ಸಾಲಿನಲ್ಲಿ ಕೊಲೆ -26 ಪ್ರಕರಣಗಳಲ್ಲಿ 21 ಪತ್ತೆಯಾಗಿವೆ. ಕೊಲೆ ಯತ್ನ-23 ಪ್ರಕರಣಗಳಲ್ಲಿ ಎಲ್ಲವನ್ನೂ ಪತ್ತೆ ಹಚ್ಚಲಾಗಿದೆ. ಒಂದು ಡಕಾಯಿತಿ ಪ್ರಕರಣ ಸಂಭವಿಸಿದ್ದು ಪತ್ತೆಹಚ್ಚಲಾಗಿದೆ. ಡಕಾಯಿತಿಗೆ ಹೊಂಚು ಹಾಕಿದ್ದ 3 ಮೂರೂ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.
ಟ ಸರಗಳ್ಳತನ-34ರಲ್ಲಿ 21. ಜನರನ್ನು ಥಳಿಸಿ ಹಣ ದೋಚಿದ 18ರಲ್ಲಿ 9. ಹಗಲು ಹೊತ್ತಿನಲ್ಲಿ ಮನೆ ಕನ್ನಾ-29ರಲ್ಲಿ 4. ರಾತ್ರಿ ಹೊತ್ತಿನಲ್ಲಿ ಮನೆ ಕನ್ನಾ 102ರಲ್ಲಿ 37. ಮನೆಗಳ್ಳತನ 33ರಲ್ಲಿ 12. ಕ್ಯಾಟಲ್ ಥೆಫ್ಟ್ 1. ಮತ್ತಿತರ ರೀತಿಯ ಕಳ್ಳತನ 86ರಲ್ಲಿ 21. ಅತ್ಯಾಚಾರ 7ರಲ್ಲಿ 7. ತೀವ್ರ ಸ್ವರೂಪದ ಅಪಘಾತ 104ರಲ್ಲಿ 98. ತೀವ್ರ ಸ್ವರೂಪವಲ್ಲದ ಅಪಘಾತ 565ರಲ್ಲಿ 557.
ಟ ಇದೇ ರೀತಿಯಾಗಿ 2012 ರಲ್ಲಿ ಕ್ರಮವಾಗಿ ಕೊಲೆ, ಕೊಲೆಗೆ ಯತ್ನ, ಡಕಾಯಿತಿ ಹಾಗೂ ಅತ್ಯಾಚಾರ ಪ್ರಕರಣಗಳ ವರದಿ ಹಾಗೂ ಪತ್ತೆಯಾಗಿರುವ ಬಗ್ಗೆ ಅಂಕಿ ಸಂಖ್ಯೆ ಇಂತಿದೆ. 18 ರಲ್ಲಿ 17,  20ರಲ್ಲಿ 18, 2ರಲ್ಲಿ 2 ಪ್ರಕರಣ ಪತ್ತೆ, ಸಂಭವಿಸಿದ್ದ 6 ಅತ್ಯಾಚಾರ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.
ಟ 2013ರಲ್ಲಿ ಕ್ರಮವಾಗಿ 19 ಕೊಲೆ ಪ್ರಕರಣಗಳು ವರದಿಯಾಗಿದ್ದು 16 ಪತ್ತೆ ಹಚ್ಚಲಾಗಿದೆ. ಕೊಲೆ ಯತ್ನ 44 ಪ್ರಕರಣಗಳು ವರದಿಯಾಗಿದ್ದು 42 ಪತ್ತೆ ಹಚ್ಚಲಾಗಿದೆ. 6 ಡಕಾಯಿತಿ ಪ್ರಕರಣಗಳು ಸಂಭವಿಸಿದ್ದು 4 ಪತ್ತೆ ಹಚ್ಚಲಾಗಿದೆ. ಸಾಮಾಜಿಕ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ 16 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದು ಎಲ್ಲವನ್ನೂ ಪತ್ತೆ ಹಚ್ಚಲಾಗಿದೆ ಎಂದೂ ಆಯುಕ್ತ ರವೀಂದ್ರಪ್ರಸಾದ ವಿವರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement