ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಬಡವರ ಸಮಸ್ಯೆಗೆ ಕೈ, ಕಮಲ ಕಾರಣ

Vishwanath S
Updated On : 30 Dec 2013, 12:23 pm

ಹುಬ್ಬಳ್ಳಿ: ರಾಜ್ಯದಲ್ಲಿ ಕಡುಬಡವರು ತುಂಬಾ ತೊಂದರೆಗೆ ಒಳಗಾಗಿದ್ದು, ಮೂಲಭೂತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್, ಬಿಜೆಪಿಗಳೇ ಕಾರಣ ಎಂದು ಬಿಎಸ್‌ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಹೇಳಿದರು.
ಇತ್ತೀಚಿಗೆ ನಗರದ ಪಾಲಿಕೆಯ ನೌಕರರ ಭವನದಲ್ಲಿ ಆಯೋಜಿಸಲಾಗಿದ್ದ ಪಕ್ಷದ ಜಿಲ್ಲಾ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
ಕಾಂಗ್ರೆಸ್‌ಗೆ ಬಡತನ ಬಂಡವಾಳವಾಗಿದ್ದರೆ ಬಿಜೆಪಿಗೆ ಕೋಮುವಾದವೇ ಬಂಡವಾಳವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನಿಜವಾಗಿ ಬಡವರ ಪರ ಕಾಳಜಿ ಇದ್ದರೆ ವಿ. ಬಾಲಸುಬ್ರಮಣಿಯನ್ ವರದಿ ಜಾರಿ ಮಾಡಲಿ. ಧಾರವಾಡ ಜಿಲ್ಲೆಯಲ್ಲಿ 2148 ಎಕರೆ ಉಳುವ ಭೂಮಿ ಒತ್ತುವರಿಯಾಗಿದೆ. ಆದರೆ, ಅದನ್ನು ಸಕ್ರಮಗೊಳಿಸುವ ಕ್ರಮ ಖಂಡಿಸುವುದಾಗಿ ಹೇಳಿದರು.
ಜನಪರ ಸರ್ಕಾರ ನೀಡಲು ಬಿಎಸ್‌ಪಿ ಬೆಂಬಲಿಸುವಂತೆಯೂ ಅವರು ಕರೆ ನೀಡಿದರು. ಪಕ್ಷದ ಜಿಲ್ಲಾ ಮುಖಂಡ ಪ್ರೇಮನಾಥ ಚಿಕ್ಕ ತುಂಬಳ ಮಾತನಾಡಿ, ಕಾರ್ಯಕರ್ತರು ಪಕ್ಷ ಸಂಘಟಿಸಬೇಕು ಎಂದರು.
ಸಭೆಯಲ್ಲಿ ಬಸವರಾಜ ಹೊಸಮನಿ, ಹನುಮಂತಪ್ಪ ಟಗರಗುಂಟಿ, ರೇವಣಸಿದ್ದಪ್ಪ ಹೊಸಮನಿ, ದುರ್ಗಪ್ಪ ಮಾದರ, ರಾಜು ವಾಲ್ಮೀಕಿ, ಗುರುಮೂರ್ತಿ ಬೆಂಗಳೂರು, ಈರಪ್ಪ ಮಾದರ, ನಿಂಗಪ್ಪ, ಚಂದ್ರಕಾಂತ ಕುರುಬರ, ಬಸಪ್ಪ ದೊಡ್ಡಮನಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement