ಇಂದು ಎಸ್‌ಡಿಎಂ ಡಾಕ್ಟರ್ ಕಾರ್ಯಕ್ರಮ
ಧಾರವಾಡ: ಡಿ. 31ರಂದು ನಡೆಯುವ ಆಕಾಶವಾಣಿ ನೇರ ಪ್ರಾಯೋಜಿತ ಎಸ್‌ಡಿಎಂ ಡಾಕ್ಟರ್ ಕಾರ್ಯಕ್ರಮದಲ್ಲಿ ದಂತ ವಿಜ್ಞಾನ ಕಾಲೇಜಿನ ಡಾ. ಪ್ರೀತಾ ಶೆಟ್ಟಿ ಬಾಯಿಯ ಆರೋಗ್ಯ ಕುರಿತು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಕೇಳುಗರು ದೂ. 0836 2443414, 2443415, 2443416 ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.
ಧಾರವಾಡ: ಸಂಗೀತ ತಜ್ಞರ ದಿನಾಚರಣೆ ಇಂದು
ಧಾರವಾಡ: ಪದ್ಮವಿಭೂಷಣ ಡಾ. ಮಲ್ಲಿಕಾರ್ಜುನ ಮನ್ಸೂರ ಸ್ಮರಣಾರ್ಥ ಕರ್ನಾಟಕ ವಿವಿ ಡಿ. 31ರ ಸಂಜೆ 4ಕ್ಕೆ ಕನ್ನಡ ಅಧ್ಯಯನ ಪೀಠದಲ್ಲಿ ಸಂಗೀತಜ್ಞರ ದಿನಾಚರಣೆ ಹಮ್ಮಿಕೊಂಡಿದೆ. ಸಂಗೀತಗಾರ ಡಾ. ಮೃತ್ಯುಂಜಯ ಅಗಡಿ ಭಾಗವಹಿಸಲಿದ್ದು, ಕುಲಪತಿ ಡಾ. ಎಚ್.ಬಿ. ವಾಲೀಕಾರ ಅಧ್ಯಕ್ಷತೆ ವಹಿಸುತ್ತಾರೆಂದು ಕುಲಸಚಿವ ಡಾ. ಚಂದ್ರಮಾ ಕಣಗಲಿ ತಿಳಿಸಿದ್ದಾರೆ.
ಧಾರವಾಡ ಜಾನಪದ ಕಲಾ ಮೇಳ ಇಂದು
ಧಾರವಾಡ: ಇಲ್ಲಿನ ಓಂಕಾರ ಸ್ಫೂರ್ತಿ ನೃತ್ಯ ಹಾಗೂ ಸಾಂಸ್ಕೃತಿಕ ಕಲಾ ಕೇಂದ್ರ ಡಿ. 31ರಂದು ರಾಜ್ಯ ಮಟ್ಟದ ಜಾನಪದ, ಸಾಂಸ್ಕೃತಿಕ ಕಲಾ ಮೇಳವನ್ನು ವಿದ್ಯಾವರ್ಧಕ ಸಂಘದಲ್ಲಿ ಸಂಜೆ 5ಕ್ಕೆ ಹಮ್ಮಿಕೊಂಡಿದೆ. ಜಾನಪದ, ಸಂಸ್ಕೃತಿ ಉಳಿಸಲು ದುಡಿದ ಕಲಾವಿದರಿಗೆ ಕಲಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.
ಇಂದು ಮದ್ಯವರ್ಜನಶಿಬಿರದ ಸಮಾರೋಪ
ಅಣ್ಣಿಗೇರಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನವಲಗುಂದ, ಜನಜಾಗೃತಿ ವೇದಿಕೆ ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಸಂಯೋಗದಲ್ಲಿ ಸ್ಥಳೀಯ ಎನ್‌ಎಟಿಪಿಎಂಎಸ್ ಸೊಸೈಯಿಟಿಯಲ್ಲಿ ಜರುಗಿದ ಒಂದು ವಾರದ ಮದ್ಯವರ್ಜನ ಶಿಬಿರದ ಸಮಾರೋಪ ಡಿ. 31ರಂದು ಜರುಗಲಿದೆ. ದಾಸೋಹಮಠದ ಶಿವಕುಮಾರ ಶ್ರೀಗಳು ಸಾನ್ನಿಧ್ಯ ವಹಿಸುವರು. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅಧ್ಯಕ್ಷತೆ ವಹಿಸುವರು. ಶಾಸಕ ಎನ್.ಎಚ್. ಕೋನರಡ್ಡಿ, ಮೋಹನ ಲಿಂಬಿಕಾಯಿ, ಕ್ರೆಡೆಲ್ ಮಾಜಿ ಅಧ್ಯಕ್ಷ ಷಣ್ಮುಖ ಗುರಿಕಾರ, ಪ್ರವೀಣ ನೀಲಮ್ಮನವರ, ವಿನ್ಸೆಂಟ್, ಶಿಬಿರಾಧಿಕಾರಿ ನಾಗೇಶ ವೈ.ಎ., ಕ್ಷೇತ್ರ ನಿರ್ದೇಶಕ ಸೀತಾರಾಮಶೆಟ್ಟಿ, ಯೋಜನಾ ಅಧಿಕಾರಿ ಸತೀಶ ಎಚ್., ಆರೋಗ್ಯ ಸಹಾಯಕಿ ಪ್ರಭಾವತಿ ಭಾಗವಹಿಸುವರು.