ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕಾಂಗ್ರೆಸ್ ಸರ್ಕಾರ ಟೀಕಿಸುವುದು ನಾಚಿಕೆಗೇಡು

Lingaraj Badiger
Updated On : 31 Dec 2013, 1:43 am

ಕುಂದಗೋಳ: ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಅನಗತ್ಯವಾಗಿ ಟೀಕಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ಮುಖಂಡ ಸಕ್ರು ಲಮಾಣಿ ಹೇಳಿದರು.
ಪಟ್ಟಣದ ರಾಜು ಕೊಕಾಟೆಯವರ ಮನೆಯಂಗಳದಲ್ಲಿ ತಾಲೂಕಿನ ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಶ್ರೀಮಂತರೆಲ್ಲ ಸರ್ಕಾರದ ಸಬ್ಸಿಡಿ ಪಡೆಯುತ್ತಾರೆ. ಆದರೆ, ಬಡವರು ಅದಕ್ಕೆ ಅನ್ವಯವಾಗದೆ ಕೇವಲ ತಮ್ಮ ಕಷ್ಟ ಕಾರ್ಪಣ್ಯಗಳಲ್ಲಿಯೇ ತೊಳಲಾಡಿ, ಕಣ್ಣೀರಿಡುವ ಇಂಥ ಜನತೆಗೆ ನಮ್ಮ ಸರ್ಕಾರ ಅನ್ನ್ನಭಾಗ್ಯ ಯೋಜನೆ ಜಾರಿಗೆ ತಂದಿದೆ. ಇದನ್ನು ಅನ್ಯಪಕ್ಷಗಳು ಟೀಕಿಸುತ್ತಿರುವುದು ಸರಿಯಲ್ಲ ಎಂದರು.
ದಯಾನಂದ ಕುಂದೂರ ಮಾತನಾಡಿ, ಮುಂಬರುವ ಲೋಕಸಭೆ ಚುನಾವಣೆಗಾಗಿ ಇಂದಿನಿಂದಲೇ ಸಿದ್ಧತೆ ಆರಂಭಿಸೋಣ. ಪ್ರತಿಹಳ್ಳಿ-ಹಳ್ಳಿಗಳಲ್ಲಿ ಕಾಂಗ್ರೆಸ್ ಮಾಡುತ್ತಿರುವ ಜನಪರ ಕಾರ್ಯಕ್ರಮಗಳ ಬಗ್ಗೆ ಜನತೆಯಲ್ಲಿ ಬಿಂಬಿಸೋಣ ಎಂದರು.
ಸಭೆಯಲ್ಲಿ ತಾಪಂ ಸದಸ್ಯರಾದ ರಂಗಪ್ಪ ಚಳ್ಳಿ, ಹನುಮಂತಪ್ಪ ಕಂಬಳಿ, ಪಪಂ ಸದಸ್ಯರಾದ ಬಸವರಾಜ ದೊಡಮನಿ, ಮಾಬೂಲಿ ನದಾಫ, ಅಜ್ಜಪ್ಪ ಕುಡುವಕ್ಕಲ, ವಿಶ್ವನಾಥ ಕೂಬಿಹಾಳ, ನಿಂಗಪ್ಪ ಹಳ್ಳಿಖೇರಿ, ರವಿರಾಜ ಭಸ್ತಿ, ರಾಜು ಕೊಕಾಟೆ, ಶಶಿಧರ ಸೋಮರೆಡ್ಡಿ, ಬಸಣ್ಣ ರಡ್ಡೇರ, ದ್ರಾಕ್ಷಾಯಿಣಿ ಕೊಪ್ಪದ, ಈರಮ್ಮ ಬಾರಕೇರ, ಶಂಕರಗೌಡ ರೊಡಗೌಡ್ರ, ಗಂಗಾಧರ ಗುಡೆಮ್ಮನವರ, ತಿಪ್ಪಣ್ಣ ತಮ್ಮಣ್ಣವರ, ಸೈಯದ್ ನದಾಫ, ಹೈದರಸಾಬ ಹಸೂಬಾಯಿ, ಇಸೂಬ ಚಡ್ಡಿ, ಬಸವರಾಜ ಶಿರಸಂಗಿ, ಸಲೀಂ ಇದ್ದರು. ಈರಪ್ಪ ನಾಗಣ್ಣವರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement