ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮುಂಬೈನಲ್ಲಿ 9, 10ಕ್ಕೆ ಹೊರನಾಡಕನ್ನಡ ಸಂಘಗಳ ಮಹಾಮೇಳ

Lingaraj Badiger
Updated On : 4 Feb 2013, 12:18 pm

ಧಾರವಾಡ: ಇಲ್ಲಿನ ಪ್ರತಿಷ್ಠಿತ ಕರ್ನಾಟಕ ವಿದ್ಯಾವರ್ಧಕ ಸಂಘ ಫೆ. 9, 10ರಂದು ಮುಂಬೈನ ಡೊಂಬಿವಲಿ ಸಾವಿತ್ರಿಬಾಯಿ ಫುಲೆ ಕಲಾಮಂದಿರದಲ್ಲಿ ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ 3ನೇ ಮಹಾಮೇಳ ಹಮ್ಮಿಕೊಂಡಿದೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಹಾಮೇಳ ಬಗ್ಗೆ ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಡಾ. ಪಾಟೀಲ ಪುಟ್ಟಪ್ಪ, ಡಾ. ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸುವರು. ಸಿರಿಗೆರೆ ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀ, ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀ ಸಾನ್ನಿಧ್ಯ ವಹಿಸುವರು.
ಮೊದಲ ದಿನ ಹೊರನಾಡಿನ ಮಕ್ಕಳಲ್ಲಿ ಕನ್ನಡ ಪ್ರತಿಷ್ಠಾನ ಗೋಷ್ಠಿ, ಮಕ್ಕಳೊಂದಿಗೆ ಮಾತುಕತೆ ಸಮಾನಾಂತರ ಗೋಷ್ಠಿ, ಸಾಂಸ್ಕೃತಿಕ ಸಂಜೆ, ಕಲಾ ಪ್ರದರ್ಶನವಿದೆ ಎಂದರು.
2ನೇ ದಿನ ವಚನಕಾರರ ಮಾನವೀಯತೆ ನಡೆ, ಕನ್ನಡ ಎಂದರೆ ಕುಣಿಯುವುದೆನ್ನ ಮನ, ಕನ್ನಡ ಸಾಹಿತ್ಯಕ್ಕೆ ಮಹಾರಾಷ್ಟ್ರದ ಕೊಡುಗೆ, ಇಂದು ಮಹಿಳೆ ಎಷ್ಟು ಸುರಕ್ಷಿತಳು, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕನ್ನಡ, ಕನ್ನಡಿಗ, ಕರ್ನಾಟಕ ಹಾಗೂ ಪತ್ರಿಕೆಗಳು ಮತ್ತು ಪ್ರಜಾಪ್ರಭುತ್ವ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ವಿಷಯ ಮಂಡನೆ. ಮುಂಬೈ ಕನ್ನಡ ಮಕ್ಕಳಿಂದ ಪ್ರತಿಭೋತ್ಸವ ಸಮಾನಂತರ ಗೋಷ್ಠಿ, ಹೊರನಾಡ ಕನ್ನಡಿಗರ ಮನದೊಳಗಿನ ಮಾತು ಗೋಷ್ಠಿ, ಕವಿಗೋಷ್ಠಿ, ಸಂಜೆ 4.30ಕ್ಕೆ ಸಮಾರೋಪ ನಡೆಯಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement