ಕಥಾ ಸಂಕಲನ ಸ್ಪರ್ಧೆಗೆ ಆಹ್ವಾನ ಇಂದು ಏಕಲವ್ಯ ನಾಟಕ
ಧಾರವಾಡ: ಹಾಲ್ಕುರಿಕೆ ಶಿವಶಂಕರ ನಿರ್ದೇಶನ-ಸಂಗೀತದ ಡಾ ಸಿದ್ಧಲಿಂಗಯ್ಯ ಅವರ 'ಏಕಲವ್ಯ' ನಾಟಕವು ಕರ್ನಾಟಕ ವಿಶ್ವವಿದ್ಯಾಲಯದ ಡಾ ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಫೆ. 6ರಂದು ಮಧ್ಯಾಹ್ನ 12.30ಕ್ಕೆ ಪ್ರದರ್ಶನಗೊಳ್ಳಲಿದೆ. ಕುಲಸಚಿವ ಡಾ ಜಿ.ಬಿ. ನಂದನ ಉದ್ಘಾಟನೆ ಮಾಡಲಿದ್ದು, ಅಧ್ಯಯನ ಪೀಠದ ಅಧ್ಯಕ್ಷ ಡಾ ಮಧು ವೆಂಕಾರೆಡ್ಡಿ ಅಧ್ಯಕ್ಷತೆ ವಹಿಸುತ್ತಾರೆಂದು ಪ್ರಕಟಣೆ ತಿಳಿಸಿದೆ.
ಧಾರವಾಡ: ಇಲ್ಲಿನ ಅವನಿ ರಸಿಕರ ರಂಗ 2011ನೇ ಸಾಲಿನ ಪ್ರತಿಷ್ಠಿತ ದೇವಾಂಗನಾ ಶಾಸ್ತ್ರಿ ಸ್ಮಾರಕ ಕಥಾ ಸಂಕಲನ ಸ್ಪರ್ಧೆಗಾಗಿ ಅರ್ಜಿ ಆಹ್ವಾನಿಸಿದೆ. ಮಹಿಳಾ ಕತೆಗಾರರಿಗೆ ಈ ಪ್ರಶಸ್ತಿ ಮೀಸಲಿದ್ದು, ಲೇಖಕಿಯರ ಚೊಚ್ಚಲ ಕಥಾ ಸಂಕಲನವಾಗಿದ್ದು, 2011ರಲ್ಲಿ ಪ್ರಕಟವಾಗಿರಬೇಕು. ಅರ್ಜಿದಾರರು ಕೃತಿಯ 5 ಪ್ರತಿಗಳನ್ನು ಕಳುಹಿಸಬೇಕು. ಶ್ರೇಷ್ಠ ಕಥಾಸಂಕಲನಕ್ಕೆ ರು. 5 ಸಾವಿರ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು. ಕಥಾಸಂಕಲನವನ್ನು ಫೆ. 25ರೊಳಗೆ ಗೌರವಾಧ್ಯಕ್ಷರು, ಅವನಿ ರಸಿಕರ ರಂಗ, 3ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, ನಾರಾಯಣಪುರ, ಧಾರವಾಡ- ಇಲ್ಲಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ದೂ. 0836- 2472131 ಸಂಪರ್ಕಿಸಬಹುದು ಎಂದು ಕಾರ್ಯಾಧ್ಯಕ್ಷ ಎನ್.ಪಿ. ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--