ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮೂವರು ಶಿಕ್ಷಕರ ವರ್ಗಾವಣೆ

Lingaraj Badiger
Updated On : 6 Feb 2013, 11:16 am

ಕುಂದಗೋಳ: ತಾಲೂಕಿನ ಸಂಕ್ಲಿಪುರ ಗ್ರಾಮದಲ್ಲಿ ಸೋಮವಾರ ನಡೆದ ವಿದ್ಯಾರ್ಥಿಗಳ ಮೇಲಿನ ಕಿರುಕುಳ ಆರೋಪ ಪ್ರಕರಣ ಹೊಸ ತಿರುವು ಪಡೆದಿದೆ. ಶಾಲೆಯ 6 ಶಿಕ್ಷಕರನ್ನು ವರ್ಗಾವಣೆ ಮಾಡಬೇಕೆಂದು ಪಟ್ಟುಹಿಡಿದ ಪರಿಣಾಮ ಸಂಜೆ 4 ಗಂಟೆಯಾದರೂ ಪರಿಸ್ಥಿತಿ ಶಾಂತವಾಗದೆ ಕೊನೆಗೆ ಬಿಇಓ ಗ್ರಾಮಸ್ಥರ ಪಟ್ಟಿಗೆ ಮಣಿದು 3 ಶಿಕ್ಷಕರನ್ನು ವರ್ಗಾವಣೆ ಮಾಡಿದ ನಂತರ ಗ್ರಾಮಸ್ಥರು ಶಾಲೆಯ ಬೀಗ ತೆಗೆದರು.
ಮಂಗಳವಾರ ಮುಂಜಾನೆ ಗ್ರಾಮದ ಶಾಲೆಗೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್. ಕೆಳದಿಮಠ ಗ್ರಾಮಸ್ಥರ ಜೊತೆಗೆ ಸಮಾಲೋಚನೆ ನಡೆಸಲು ಮುಂದಾದಾಗ ಕೆಲವು ಯುವಕರು ಆ ಶಿಕ್ಷಕರ ಮೇಲೆ ಕ್ರಮ ಜರುಗಿಸಬೇಕೆಂದು ಪಟ್ಟು ಹಿಡಿದ ಪರಿಣಾಮ ಪರಿಸ್ಥಿತಿ ಕೈಮೀರುವ ಹಂತ ತಲುಪಿತು.
ಅನಂತರ ಕೆಲ ಹಿರಿಯರು ಶಾಂತಗೊಳಿಸಿ ಯುವಕರ ಮನವೊಲಿಸುವ ಮೂಲಕ ಈಗ 3 ಶಿಕ್ಷಕರನ್ನು ವರ್ಗಾವಣೆ ಮಾಡಲು ಅಧಿಕಾರಿಗಳು ಒಪ್ಪಿದ್ದು, ಇನ್ನೂ ಉಳಿದ 3 ಶಿಕ್ಷಕರನ್ನು 1 ತಿಂಗಳ ಅನಂತರ ವರ್ಗಾವಣೆ ಮಾಡುವುದಾಗಿ ಭರವಸೆ ನೀಡಿದ ನಂತರ ಯುವಕರು ಸಮಾಧಾನ ಗೊಂಡು ಶಾಲೆಯ ಬೀಗ ತೆರೆದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement