ಅನ್ಯ ಮತಗಳನ್ನು ದ್ವೇಷಿಸಬೇಡಿ
ಕುಂದಗೋಳ: ಭರತ ಖಂಡದಲ್ಲಿ ಅನೇಕ ಮತಗಳಿದ್ದು, ಎಲ್ಲ ಮತಗಳು ಶಾಂತಿ ಮಂತ್ರವನ್ನು ಸಾರುತ್ತವೆ. ಎಲ್ಲರೂ ಅನ್ಯ ಮತವನ್ನು ದ್ವೇಷಿಸಿದೆ ಸೌಹಾರ್ದಯುತವಾಗಿ ಜೀವಿಸಬೇಕು ಎಂದು ಹಿರೇಹರಕುಣಿಯ ಶ್ರೀ ಮಂಗಲಶಾ ಖಾದರಲಿಂಗ ಪೂಜ್ಯರು ಹೇಳಿದರು. ಅವರು ಇಲ್ಲಿನ ಹಜರತ್ ಶಾವಲಿ ಬಾಬಾ ಅವರ ಉರುಸ್ ನಿಮಿತ್ತ ಗುರುವಾರ ಮಧ್ಯಾಹ್ನ ನಡೆದ ಮುಸ್ಲಿಂ ಬಾಂಧವರ ಉಚಿತ ಸಾಮೂಹಿಕ ವಿವಾಹದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಸಿ.ಎಸ್. ಶಿವಳ್ಳಿ, ಮಾಜಿ ಶಾಸಕ ಎಂ.ಎಸ್. ಅಕ್ಕಿ ಮಾತನಾಡಿದರು. ಅಲ್ಲಾಮಾ ಮೌಲಾನಾ ಮಹ್ಮದ್ ಶಮ್ಸುದ್ದೀನ್ ಹಾಗೂ ಅಲ್ಲಾಮ ನಿಸಾರಹಮ್ಮದ್ ಛಗನ್ ನೂತನ ದಾಂಪತ್ಯಕ್ಕೆ ಕಾಲಿರಿಸಿದ ವಧು ವರರನ್ನು ಆಶೀರ್ವದಿಸಿದರು. ಡಾ.ಎ.ಎಸ್. ಮುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ದಾದಾಪೀರ ಕೊಪ್ಪಳ, ಇಕ್ಬಾಲ್ ಮಿರ್ಜಿ, ಸೋಮಣ್ಣ ದೇಸಾಯಿ, ಪರಶುರಾಂ ಕಲಾಲ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮೋಹನ ಅಸುಂಡಿ, ಅಜ್ಜಪ್ಪ ಕುಡುವಕ್ಕಲ, ಕೆ.ಬಿ. ಮಕಂದಾರ, ಮಹ್ಮದ್ ನಾಶವಾಲೆ, ಸಿ.ಎಂ. ಕಾಳೆ, ಹೈದರಸಾಬ ಹಸೂಬಾಯಿ, ವಲಿವುಲ್ಲಾ ಮುಲ್ಲಾ, ನಜೀರ್ ಬಾಣಿ, ಇಸೂಬ್, ಬಾಬಾಜಾನ ಮಿಶ್ರಿಕೋಟಿ ಹಾಜರಿದ್ದರು. ಎನ್.ಎಚ್. ಯಲಿಗಾರ ನಿರೂಪಿಸಿ, ವಂದಿಸಿದರು. ರಫೀಕ್ ಮುಲ್ಲಾ ಸ್ವಾಗತಿಸಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.