ರಾಜ್ಯ ಬಜೆಟ್ 2013
ಪ್ರಸಕ್ತದ ಬಜೆಟ್ ಸಿಎಂ ಶೆಟ್ಟರ್ ದೂರದೃಷ್ಟಿ ಕೊರತೆ ತೋರಿಸುತ್ತದೆ. ಹೆಸರಿಗೆ ಮಾತ್ರ ಅಭಿವೃದ್ಧಿ ಪರ ಬಜೆಟ್ ಎಂದು ಹೇಳಿಕೊಂಡಿದ್ದಾರೆ. ಮಂಡಿಸಿರುವ ಅಂಶಗಳು ಅಭಿವೃದ್ಧಿಪರವಾಗಿರದೇ ಬಿಜೆಪಿ ಪ್ರಣಾಳಿಕೆಯಾಗಿದೆ.
-ಸಂತೋಷ ಅಗಡಿ, ನಾಗರಿಕ
ಬಜೆಟ್‌ನಲ್ಲಿ ಎಲ್ಲ ವರ್ಗಕ್ಕೆ ಪ್ರಾಶಸ್ತ್ಯ ನೀಡಿರುವುದರಿಂದ ಅಭಿವೃದ್ಧಿ, ಜನಪರ ಬಜೆಟ್ ಆಗಿದೆ. ಧಾರ್ಮಿಕ ಸಂಸ್ಥೆಗಳಿಗೆ ಅನುದಾನ ಹರಿಸಲಾಗಿದೆ. ಹಿಂದುಳಿದ ಸಮಾಜವನ್ನು ಮುಖ್ಯ ವಾಹಿನಿಗೆ ಕರೆತರಲು ಆದರ್ಶ ಬಜೆಟ್ ಆಗಿದೆ.
-ಸೋಮಣ್ಣ ಬೇವಿನಮರದ, ವಿಪ ಸದಸ್ಯ
ಬಜೆಟ್ ಸಿಎಂ ಜಗದೀಶ ಶೆಟ್ಟರ್ ದೂರದೃಷ್ಟಿ ನಾಯಕ ಎಂಬುದಕ್ಕೆ ಸಾಕ್ಷಿ. ಎಲ್ಲ ವರ್ಗಕ್ಕೆ ನ್ಯಾಯ ಒದಗಿಸಿದ್ದಾರೆ. ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಸಮರ್ಥ ಹಾಗೂ ದಕ್ಷ ಸಿಎಂ ಎಂಬುದನ್ನು ಸಾಬೀತು ಪಡಿಸಿದ್ದಾರೆ.
-ಭೋಜರಾಜ ಕರೂದಿ
ಬಜೆಟ್‌ನಲ್ಲಿ ಗ್ರಾಪಂಗಳಿಗೂ ನೇರ ಅನುದಾನ ನೀಡಬಹುದಾಗಿತ್ತು. ಗ್ರಾಮೀಣಾಭಿವೃದ್ಧಿ ಸಚಿವರಾಗಿ ಅನುಭವಿಗಳಾಗಿದ್ದರೂ ಗ್ರಾಪಂಗಳನ್ನು ನಿರ್ಲಕ್ಷ್ಯಿಸಲಾಗಿದೆ. ಬಿಜೆಪಿ-ಕೆಜೆಪಿ ಕಾದಾಟದಲ್ಲಿ ಹಾವೇರಿ ಜಿಲ್ಲೆ ಬಡವಾಗಿದೆ.
-ಡಾ. ಸತೀಶ ಈಳಗೇರ
ಸಿಎಂ ಶೆಟ್ಟರ್ ಮಂಡಿಸಿದ ಬಜೆಟ್ ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿಗಿದೆ. ಹಾವೇರಿ, ರಾಣಿಬೆನ್ನೂರು ಅಭಿವೃದ್ಧಿಗೆ ಕೊಂಚ ನೀಡುವುದಾಗಿ ಹೇಳಿ, ಸರ್ವಜ್ಞ ಪ್ರಾಧಿಕಾರಕ್ಕೆ ನಿರ್ಲಕ್ಷ್ಯಿಸಿದ್ದಾರೆ. ಹೊಸ ತಾಲೂಕಿಲ್ಲ.
-ನೂರಅಹ್ಮದ್ ಮಿರ್ಜಾನವರ
ವಿತ್ತೀಯ ಬೆಳವಣಿಗೆ ಕುರಿತು ಚಿಂತಿಸದೇ ರು. 22 ಸಾವಿರ ಕೋಟಿ ಸಾಲ ಮಾಡಿ ಬಜೆಟ್ ಮಂಡಿಸುವ ಅವಶ್ಯಕತೆ ಏನಿತ್ತು.. ಕೇಂದ್ರಕ್ಕೂ ಮುನ್ನ ರಾಜ್ಯ ಬಜೆಟ್ ಮಂಡನೆ ಅಸಂವಿಧಾನಿಕ ಕ್ರಮ, ಬಜೆಟ್ ಹ್ಯಾಂಡ್‌ಬಿಲ್‌ನಂತಿದೆ.
-ಎಸ್.ಆರ್. ಪಾಟೀಲ, ಮುಖಂಡ
ದೂರದೃಷ್ಟಿ ಬಜೆಟ್ ಇದಾಗಿದ್ದರೂ ತೆರಿಗೆ ಸಂಗ್ರಹಣಾ ವಲಯಗಳನ್ನು ಹೆಚ್ಚಿಸಬಹುದಾಗಿತ್ತು. ಅಭಿವೃದ್ಧಿ ಕಾಮಗಾರಿಗಳಿಗೆ ಕಾಲಮಿತಿ ನಿಗದಿಪಡಿಸಿಲ್ಲ.
-ಎಸ್.ಎಂ. ಕೆಂಬಿ, ವರ್ತಕ
ಕೃಷಿಗೆ ರು. 22 ಸಾವಿರ ಕೋಟಿ ಅನುದಾನ ಸ್ವಾಗತಾರ್ಹ. ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆಗೆ ಅನುದಾನ ಹೆಚ್ಚಿಸಿಲ್ಲ. ಜಿಲ್ಲೆ ಮಟ್ಟಿಗೆ ಇದು ಶೂನ್ಯ ಬಜೆಟ್.
-ಗಂಗಣ್ಣ ಎಲಿ ಕೃಷಿಕ ಸಮಾಜ
ಬಜೆಟ್ ಸಮತೋಲನ ದಿಂದ ಕೂಡಿದೆ. ಭಾಗ್ಯಲಕ್ಷ್ಮೀ ಯೋಜನೆ ರು. 18 ಸಾವಿರಕ್ಕೆ ಏರಿಕೆ, ಅಂಗನವಾಡಿ ಕಾರ್ಯಕರ್ತೆಯರ ವೇತನ ಹಾಗೂ ಅಂಗವಿಕಲ ವೃದ್ಧಾಪ್ಯ ವೇತನ ಹೆಚ್ಚಿಸಿರುವುದು ಸ್ವಾಗತಾರ್ಹ.
-ಚಂದ್ರಣ್ಣ ಮುಚ್ಚಟ್ಟಿ
ಪ್ರಸಕ್ತ ಬಜೆಟ್ ಶಿಕ್ಷಣ ಪರವಾಗಿದೆ. ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿ ನಿಲಯ, ಶಿಕ್ಷಕರ ನೇಮಕ, ಇತರ ವಿಷಯಗಳ ಮೇಲೆ ಆಶಾಭಾವನೆ ಮೂಡಿಸಿದೆ.
-ಸಾಗರ ಗುಡಿಸಾಗರ, ಸ್ನಾತಕೋತ್ತರ ವಿದ್ಯಾರ್ಥಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.