ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಹುಬ್ಬಳ್ಳಿ ಹುಡುಗರಿಗೆ ಜೀವನಗಾಥೆ ಪಾಠ

Parashurama
Updated On : 10 Feb 2013, 11:27 am

ಹುಬ್ಬಳ್ಳಿ:  ಕಲ್ಪನೆಗೂ ನಿಲುಕದಂತಹ ಸಮಸ್ಯೆಗಳನ್ನು ಎದುರಿಸಿ ಯಶಸ್ವಿಯಾಗಿರುವ ಯುವಕನೊಬ್ಬನ ಜೀವನಗಾಥೆಯನ್ನು ಕೇಳುವಂತಹ ಅವಕಾಶ ಹುಬ್ಬಳ್ಳಿ ಸೇರಿದಂತೆ ರಾಷ್ಟ್ರದ ಪ್ರಮುಖ ಬ್ಯುಸಿನೆಸ್ ಸ್ಕೂಲ್ ವಿದ್ಯಾರ್ಥಿಗಳಿಗೆ ಶನಿವಾರ ಲಭಿಸಿದ್ದು ಆವಿಷ್ಕಾರ್-2013ರಲ್ಲಿ. ಕೆಎಲ್‌ಇ ಕಾಲೇಜ್ ಆಫ್ ಬ್ಯುಸಿನೆಸ್ ಆಡ್ಮಿನಿಸ್ಟ್ರೇಷನ್ ಆಯೋಜಿಸಿರುವ ಎರಡು ದಿನಗಳ ಆವಿಷ್ಕಾರ್ ಮ್ಯಾನೆಜ್ಮೆಂಟ್ ಫೆಸ್ಟ್‌ನ ಉದ್ಘಾಟನೆಗೆ ಆಗಮಿಸಿದ್ದ ಇಂಡಸ್ ಇಂಡ್ ಬ್ಯಾಂಕ್‌ನ ಸಹಾಯಕ ಪ್ರಬಂಧಕ ಸಿದ್ಧಾರ್ಥ ಜಯಕುಮಾರ್ ಜೀವನಗಾಥೆ ವ್ಯವಸ್ಥಾಪನಾ ವಿದ್ಯಾರ್ಥಿಗಳಿಗೆ ಒಂದು ಪಾಠವಾಯಿತು. ಹುಟ್ಟಿದ ಮೂರು ದಿನದೊಳಗೆ ಮೆದುಳು ಸಂಬಂಧಿ ಕಾಯಿಲೆ ಸೆರೆಬ್ರಲ್ ಪಾಲ್ಸಿಗೆ ತುತ್ತಾಗಿ ಸಂಕಷ್ಟಗಳ ಸರಮಾಲೆ ಎದುರಿಸಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಸಿದ್ಧಾರ್ಥ ಜಯಕುಮಾರ್ ಇಂದಿನ ವಿದ್ಯಾರ್ಥಿಗಳ ದೃಷ್ಟಿಯಲ್ಲಿ ಸಾಧಕನಾಗಿದ್ದಾರೆ.
ಪ್ರತಿಭೆ ಅನಾವರಣ: ಆವಿಷ್ಕಾರ್-13 ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಆತ್ಮವಿಶ್ವಾಸ ಮತ್ತು ದೃಢ ನಿರ್ಧಾರದಿಂದ ತಮ್ಮಲ್ಲಿ ಹುದುಗಿರುವ ಪ್ರತಿಭೆಯ ಅನಾವರಣ ಮಾಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿ, ವ್ಯಕ್ತಿಯಲ್ಲಿ ಅವನದೇ ಆದ ಸಾಮರ್ಥ್ಯವಿರುತ್ತದೆ. ಈ ಸಾಮರ್ಥ್ಯವನ್ನು ಗುರುತಿಸುವ ಕೆಲಸ ಅವರಿಂದ ಆದರೆ ಮಾತ್ರ ಸಾಧನೆಯ ಶಿಖರ ಏರಲು ಸಾಧ್ಯ ಎಂದು ಹೇಳಿದರು.  ಇನ್ನೊಬ್ಬರ ಮೇಲೆ ಪ್ರಭಾವ ಬೀರುವ ತುಡಿತ ನಮ್ಮಲ್ಲಿರಬಾರದು. 'ನಿಮಗಾಗಿ ಗುರಿ ನಿರ್ಧರಿಸಿಕೊಳ್ಳಿ ಅದರ ಹಾದಿಯಲ್ಲಿ ಸಾಗಿ. ಸೋಲಿನಲ್ಲಿ ಕುಂದಬೇಡಿ'. ಪರರಿಗೆ ನೀಡುವ ಸುಖದಲ್ಲಿ ನಮ್ಮ ಸುಖವಿದೆ ಎಂದು ತಮ್ಮ ಅನುಭವ ಹಂಚಿಕೊಂಡರು. ನಂತರ ವಿದ್ಯಾರ್ಥಿಗಳಿಂದ ಎದುರಾದ ಹಲವಾರು ಪ್ರಶ್ನೆಗಳಿಗೆ ಸಿದ್ಧಾರ್ಥ ಜಯಕುಮಾರ್ ಉತ್ತರಿಸಿದರು. ಸ್ಥಳೀಯ ಆಡಳಿತ ಮಂಡಳಿ ಅಧ್ಯಕ್ಷ ಅನಿಲ ಪಟ್ಟೇದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಂಶುಪಾಲ ಪ್ರೊ. ಆನಂದ್ ವಡ್ಡಿನ ಇದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments