ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅಶೋಕನಗರ: ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವ

Lingaraj Badiger
Updated On : 13 Feb 2013, 11:18 am

ಹುಬ್ಬಳ್ಳಿ:  ಅಶೋಕ ನಗರ ಶ್ರೀ ಮಾರುತಿ ದೇವಸ್ಥಾನದಲ್ಲಿ ಮಹಾದೇವ, ಗಣಪತಿ, ಸುಬ್ರಹ್ಮಣ್ಯ ಹಾಗೂ ನವಗ್ರಹ ದೇವತೆಗಳ ಪ್ರತಿಷ್ಠಾಪನಾ ಮಹೋತ್ಸವ ಮಂಗಳವಾರದಿಂದ ಆರಂಭಗೊಂಡಿದೆ.
ಮಹೋತ್ಸವದ ಅಂಗವಾಗಿ ಪೂರ್ಣ ಕಲಶ ಮೆರವಣಿಗೆ ನಡೆಯಿತು. ಗುಜರಾತ್ ಭವನದ ಹತ್ತಿರದಲ್ಲಿರುವ ಶ್ರೀಕೃಷ್ಣ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ದೇಶಪಾಂಡೆ ನಗರ, ವಿಜಯನಗರ ಮಾರ್ಗವಾಗಿ ಅಶೋಕ ನಗರ ಮಾರುತಿ ದೇವಸ್ಥಾನ ತಲುಪಿತು. ಮೂರ್ತಿ ಪೂಜೆ, ಹವನ ಯಜ್ಞ ಯಾಗಾದಿಗಳು ನೆರವೇರಿದವು. ಇಲ್ಲಿನ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ರಾಯಚೂರು ಶೇಷಗಿರಿದಾಸರಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು.
ಫೆ. 13ರಂದು ಸಪ್ತಾಧಿವಾಸ, ತತ್ವಹೋಮ, ನವಗ್ರಹ ಹೋಮ, ಮಂಡಲ ಪೂಜೆ, ಮಹಾಮೃತ್ಯುಂಜಯ ಯಾಗ, ಆಶ್ಲೇಷಾ ಬಲಿ ನಡೆಯಲಿದೆ. ಸಂಜೆ 6ಕ್ಕೆ ಮೈಸೂರ ರಾಮಚಂದ್ರರಾಯ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಫೆ. 14ರ ಬೆಳಗ್ಗೆ 10.30ಕ್ಕೆ ಸುಶಮೀಂದ್ರ ತೀರ್ಥರಿಂದ ಸಂಸ್ಥಾನ ಪೂಜೆ ನಡೆಯಲಿದೆ.
ಬಿಂಬ ಪ್ರತಿಷ್ಠಾಪನಾ ಮಹೋತ್ಸವ, ಕಳಶಾಭಿಷೇಕ, ಪ್ರಧಾನ ಪ್ರತಿಷ್ಠಹೋಮ, ಕಲಶಾರೋಹಣ, ಮಹಾಪೂಜೆ, ಹಾಗೂ ಸುವಿದ್ಯೇಂದ್ರ ತೀರ್ಥರಿಂದ ಅನುಗ್ರಹ ಸಂದೇಶ ಹಾಗೂ ಮಧ್ಯಾಹ್ನ 1.30ಕ್ಕೆ ಮಹಾಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6ಕ್ಕೆ ಪುತ್ತೂರು ನರಸಿಂಹನಾಯಕ್ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement