ಕಿಡ್ನಿ ಅಳವಡಿಸಿರುವ ಪುತ್ರನ ಚಿಕಿತ್ಸಾ ವೆಚ್ಚಕ್ಕೆ ಮನವಿ
ಹುಬ್ಬಳ್ಳಿ: ಕಿಡ್ನಿ ಅಳವಡಿಸಿರುವ ತನ್ನ ಮಗನ ಚಿಕಿತ್ಸೆಯ ಖರ್ಚಿಗೆ ಸಹಾಯ ಮಾಡುವಂತೆ ನಗರದ ಕಡುಬಡವ ವ್ಯಕ್ತಿಯೊಬ್ಬರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕಿಡ್ನಿ ವೈಫಲ್ಯದಿಂದ ನರಳುತ್ತಿದ್ದ ಇಲ್ಲಿಯ ಅಧ್ಯಾಪಕ ನಗರದ ಅಮರನಾಥ ಸಿಡಗಂಟಿಮಠ ಎಂಬ 12 ವರ್ಷದ ಬಾಲಕನಿಗೆ ಈತನ ತಾಯಿ ಕಿಡ್ನಿ ದಾನ ಮಾಡಿದ್ದಾಳೆ. ಕಿಡ್ನಿ ಅಳವಡಿಕೆಗೆ ರು. 7 ಲಕ್ಷಕ್ಕೂ ಅಧಿಕ ವೆಚ್ಚವಾಗಿದೆ. ಅಮರನಾಥನ ಮುಂದಿನ ಚಿಕಿತ್ಸೆಗೆ ಪ್ರತಿ ತಿಂಗಳೂ ಕನಿಷ್ಠ ರು. 20 ಸಾವಿರ ಅಗತ್ಯವಿದೆಯಲ್ಲದೇ ಬೆಂಗಳೂರು ಮಣಿಪಾಲ ಆಸ್ಪತ್ರೆಗೆ ತಪಾಸಣೆಗೆ ಹೋಗಬೇಕಾಗುತ್ತದೆ. ಕಿಡ್ನಿ ಹಸ್ತಾತಂರಕ್ಕೆ ಈಗಾಗಲೇ ಹಲವೆಡೆ ಸಾಲ ಮಾಡಿದ್ದು, ದಾನಿಗಳು ಸಹಾಯ ಮಾಡಿದ್ದಾರೆ. ಪ್ರತಿ ತಿಂಗಳಿನ ಚಿಕಿತ್ಸೆಗೆ ಸಾಲವೂ ದೊರಕುತ್ತಿಲ್ಲ. ಆದ ಕಾರಣ ದಾನಿಗಳು ಸಹಾಯ ಮಾಡಿದ್ದಲ್ಲಿ ತಮ್ಮ ಮಗನಿಗೆ ಚಿಕಿತ್ಸೆ ಒದಗಿಸಲು ಅನುಕೂಲವಾಗುತ್ತದೆ ಎಂದು ಬಾಲಕನ ತಂದೆ ವೀರಭದ್ರಯ್ಯ ಸಿಡಗಂಟಿಮಠ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಎಸ್ಬಿ ಖಾತೆ ಸಂಖ್ಯೆ: 89008332131, ಕೆವಿಜಿ ಬ್ಯಾಂಕ್, ವಿಜಯನಗರ, ಹುಬ್ಬಳ್ಳಿ ಶಾಖೆಗೆ ದಾನಿಗಳು ಹಣ ಸಂದಾಯ ಮಾಡುವಂತೆ ಹಾಗೂ ಮಾಹಿತಿಗೆ ಮೊಬೈಲ್ ಸಂ- 9880270835 ಅಥವಾ 7760243760 ಸಂಪರ್ಕಿಸುವಂತೆ ವೀರಭದ್ರಯ್ಯ ಸಿಡಗಂಟಿಮಠ ಕೋರಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.