ಇಂದು ಬಸವರಾಜ ಮಹಾಸ್ವಾಮಿಗಳ ಪುಣ್ಯಾರಾಧನೆ
ಕುಂದಗೋಳ: ಇಲ್ಲಿನ ಶ್ರೀ ಶಿವಾನಂದ ವಿದ್ಯಾಪೀಠ ಶಾಲೆ ಆವರಣದಲ್ಲಿ ಫೆ. 27ರಂದು ಬೆಳಗ್ಗೆ 10ಕ್ಕೆ ಬಸವೇಶ್ವರ ಮಹಾಸ್ವಾಮಿಗಳ ಮತ್ತು ಬಸವರಾಜ ಮಹಾಸ್ವಾಮಿಗಳ 6ನೇ ಪುಣ್ಯಾರಾಧನೆ ಕಾರ್ಯಕ್ರಮ ಜರುಗಲಿದ್ದು, ಜ್ಞಾನಯೋಗಿ ಪೂಜ್ಯ ಶ್ರೀಸಿದ್ಧೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಘೋಡಗೇರಿಯ ಮಲ್ಲಯ್ಯಮಹಾಸ್ವಾಮಿಗಳು, ಶ್ರೀ ಶಿವಾನಂದ ಮಠದ ಬಸವೇಶ್ವರ ಮಹಾಸ್ವಾಮಿಗಳು ನೇತೃತ್ವ ವಹಿಸುವರು.
ವಿಜಾಪುರದ ಇಷ್ಟಲಿಂಗ, ಮಿರಜದ ಶಿವದೇವ, ತಿಕೋಟಾ ಚನ್ನಮಲ್ಲಿಕಾರ್ಜುನ, ಕನೇರಿ ಕಾಡಸಿದ್ದೇಶ್ವರ, ಚಡಚಣದ ಯೋಗಾನಂದ, ಮೈಗೂರಿನ ಗುರುಪ್ರಸಾದ, ವಿಜಾಪುರದ ಆತ್ಮಾರಾಂ ಮತ್ತು ಷಡಕ್ಷರಿ, ಕೃಷ್ಣಾಕಿತ್ತೂರದ ಬಸವೇಶ್ವರ, ಹನುಮನಹಳ್ಳಿ ಶಿವಬಸವ, ಹುಲ್ಯಾಳದ ಹರ್ಷಾನಂದ, ಘೋಡಗೇರಿ ಕೈವಾಲ್ಯಾನಂದ ಮಹಾಮಹಾಸ್ವಾಮಿಗಳು ಪಸ್ಥಿತಿಯಲ್ಲಿರುವರು. ಅತಿಥಿಗಳಾಗಿ ಶಂಕರಪಾಟೀಲ ಮುನೇನಕೊಪ್ಪ, ಎಂ.ಎಸ್. ಕಟಗಿ, ಡಿ.ಆರ್. ಪಾಟೀಲ, ಎಂ.ಎಸ್. ಅಕ್ಕಿ, ಎಂ.ಆರ್. ಪಾಟೀಲ, ಪ್ರಲ್ಹಾದ ಜೋಶಿ, ಎಸ್.ಐ. ಚಿಕ್ಕನಗೌಡ್ರ, ಸಿ.ಎಸ್. ಶಿವಳ್ಳಿ, ಶ್ರೀನಿವಾಸ ಮಾನೆ, ಮಂಜುನಾಥ ಕುನ್ನೂರು ಉಪಸ್ಥಿತರಿರುವರೆಂದು ಜೆಎಸ್‌ಎಸ್ ವಿದ್ಯಾಪೀಠ ಸದಸ್ಯ ಕಾರ್ಯದರ್ಶಿ ವೈ.ಎಸ್. ಮೆಗುಂಡಿ ತಿಳಿಸಿದ್ದಾರೆ.