ಲಕ್ಷ ಧನಸಹಾಯ ಚೆಕ್ ವಿತರಣೆ
ಕುಂದಗೋಳ: ತಾಲೂಕಿನ ಹರ್ಲಾಪೂರ ಗ್ರಾಮದ ಶ್ರೀ 1008 ಪಾರ್ಶ್ವನಾಥ ತೀರ್ಥಂಕರ ಬಸದಿ ಜೀರ್ಣೋದ್ಧಾರ ಕಾರ್ಯಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ನೀಡಿದ ರು. 1 ಲಕ್ಷ ಧನಸಹಾಯದ ಚೆಕ್‌ನ್ನು ಸಂಶಿ ವಲಯದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿ ಹೊನ್ನಪ್ಪ ವಿತರಿಸಿದರು. ಜೈನ ಸಮಾಜದ ಮುಖಂಡರಾದ ಅರುಣ ಪಾಟೀಲ, ಧರೇಂದ್ರಗೌಡ ಪಾಟೀಲ, ಜೀವನಗೌಡ ಪಾಟೀಲ, ಭೂಪಾಲಗೌಡ ಭೀಮನಗೌಡ್ರ, ಸುಭಾಷ ಹರವಿ, ಮಹಾವೀರ ಹರವಿ, ಬಾಹುಬಲಿ ಹರವಿ, ವರ್ಧಮಾನ್ ಭೀಮನಗೌಡ್ರ ಇದ್ದರು.