ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನಷ್ಟವನ್ನು ಗ್ರಾಹಕರಿಗೆ ಹೊರಿಸಿದರೆ ಪ್ರತಿಭಟನೆ

Mainashree
Updated On : 23 Jan 2013, 11:13 am

ಹುಬ್ಬಳ್ಳಿ: ಪ್ರತಿ ಲೀಟರ್ ಹಾಲಿಗೆ ರು. 4 ಏರಿಕೆಗೆ ಕರ್ನಾಟಕ ಹಾಲು ಉತ್ಪಾದಕ ಮಹಾಮಂಡಳದ ಪ್ರಸ್ತಾವನೆಯನ್ನು ಸರ್ಕಾರ ತಿರಸ್ಕರಿಸಬೇಕೆಂದು ಸಿಎಂ ಜಗದೀಶ ಶೆಟ್ಟರ್‌ಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಯುವ ಜನತಾದಳದ ಕಾರ್ಯಕರ್ತರು ಮಂಗಳವಾರ ತಹಸೀಲ್ದಾರ್ ಮುಖಾಂತರ ಮನವಿ ಸಲ್ಲಿಸಿದರು.
ನಗರದ ಲ್ಯಾಮಿಂಗ್ಟನ್ ರಸ್ತೆಯಲ್ಲಿ ನಂದಿನಿ ಕ್ಷೀರ ಮಳಿಗೆ ಎದುರು ಪ್ರತಿಭಟನೆ ಮಾಡಿ ನಂತರ ತಹಸೀಲ್ದಾರ್‌ಗೆ ಮಕ್ಕಳ ಮುಖಾಂತರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಯುವ ಜನತಾದಳ ಮೋರ್ಚಾ ಅಧ್ಯಕ್ಷ ವಿಜಯ ಅಳಗುಂಡಗಿ, ಕಳಪೆ ಆಡಳಿತ ನಿರ್ವಹಣೆಯಿಂದಾಗಿ ನಷ್ಟದಲ್ಲಿ ಮುಳುಗಿರುವ ಸಂಸ್ಥೆಯ ನಷ್ಟ ಸರಿದೂಗಿಸಲು ಹಾಲು ದರ ಏರಿಕೆ ಕ್ರಮಕ್ಕೆ ಕೆಎಂಎಫ್ ಆಡಳಿತ ಮಂಡಳಿ ಮುಂದಾಗಿದೆ. ನೂರಾರು ಟನ್ ಹಾಲಿನ ಪುಡಿ ಮಾರಾಟವಾಗದೆ ಉಳಿದಿರುವುದು ಕೆಎಂಎಫ್‌ನ ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿ ಎಂದು ಆರೋಪಿಸಿದರು.
ಗುಜರಾತ್‌ನ ಹಾಲು ಉತ್ಪಾದಕರ ಸಹಕಾರಿ ಸಂಸ್ಥೆ ತನ್ನ ಆಡಳಿತ ವ್ಯವಸ್ಥೆಯಿಂದಾಗಿ ಖಾಸಗಿ ಕಂಪನಿಗಳೊಂದಿಗೆ ಪೈಪೋಟಿ ಮಾಡಿ ಯಶಸ್ಸು ಸಾಧಿಸಿದೆ. ಆದರೆ, ಕೆಎಂಎಫ್ ಮಾತ್ರ ಈ ನಿಟ್ಟಿನಲ್ಲಿ ವಿಫಲಗೊಂಡು ನಷ್ಟದಲ್ಲಿ ಸಾಗುತ್ತಿದೆ. ಅವ್ಯವಹಾರದ ಕಾರಣ ಆಗುತ್ತಿರುವ ನಷ್ಟವನ್ನು ಗ್ರಾಹಕರ ಮೇಲೆ ಹೊರಿಸುವುದಕ್ಕೆ ಕೆಎಂಎಫ್ ಪ್ರಯತ್ನಿಸಿದರೆ ಅಂತಹ ಕ್ರಮದ ವಿರುದ್ಧ ಹೋರಾಟ ಅನಿವಾರ್ಯ ಎಂದು ಮನವಿಯಲ್ಲಿ ಎಚ್ಚರಿಸಿಲಾಗಿದೆ.
ಈ ಸಂದರ್ಭದಲ್ಲಿ ಇಮ್ತಿಯಾಜ್ ಖತೀಬ್, ಅಜಯ ಹೀರೇಮಠ, ಇರ್ಷಾದ್ ಭದ್ರಾಪುರ, ನಿಂಗಪ್ಪ ಅಂಬಿಗೇರ, ಮುಕ್ತುಂ ಯರಗಟ್ಟಿ, ವೇಂಕಟೇಶ ಗದ್ದಿ, ವಿನಾಯಕ ಶೆಟ್ಟಿ, ಗಣೇಶ ಪೈ, ದೀಪಕ್ ಪೂಜಾರಿ, ಜಾಕೀರ್ ಹುಸೇನ್, ಶಾಹಿದ್ ನರಗುಂದ, ಮೂಸಾ ನಾಯ್ಕೋಡಿ, ಶಾರುಖ್ ನಾಯ್ಕೋಡಿ, ಅಮೃತ ಧಾರವಾಡ, ಪ್ರಸನ್ ಕುಮಾರ್ ಮಿರಜಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement